ಬಾಹುಬಲಿ ನಟ ಪ್ರಭಾಸ್ ಸಾಹೋ ಚಿತ್ರದ ಬಳಿಕ ಜಾನ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಈ ಹಿಂದೆ ಹರಿದಾಡಿತ್ತು. ಇದೀಗ ಈ ಚಿತ್ರದ ಮತ್ತಷ್ಟು ಅಪ್ಡೇಟ್ಗಳು ಹೊರಬೀಳುತ್ತಿವೆ.
2/ 13
ಜಾನ್ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಲಿರುವುದು ಕನ್ಫರ್ಮ್ ಆಗಿದೆ. ಅದರೊಂದಿಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಭಾಗ್ಯಶ್ರೀ ಕೂಡ ಕಾಣಿಸಿಕೊಳ್ಳಲಿದ್ದಾರೆ.
3/ 13
ಹೌದು, ಟಾಲಿವುಡ್ ಮೂಲಗಳ ಪ್ರಕಾರ ಭಾಗ್ಯಶ್ರೀ ಜಾನ್ ಚಿತ್ರದಲ್ಲಿ ಪ್ರಭಾಸ್ ಅಮ್ಮನಾಗಿ ಬಣ್ಣ ಹಚ್ಚಲಿದ್ದಾರೆ.
4/ 13
ಸಲ್ಮಾನ್ ಖಾನ್ ಜೊತೆಗಿನ ಮೈ ನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟಿ ಕಳೆದೊಂದು ದಶಕದಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು.
5/ 13
ಮೊದಲ ಬಾಲಿವುಡ್ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಬಿಟೌನ್ ಸುಂದರಿ ಆ ಬಳಿಕ ದಕ್ಷಿಣ ಚಿತ್ರರಂಗದತ್ತ ಮುಖ ಮಾಡಿದ್ದರು.
6/ 13
ಹಾಗೆಯೇ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮಿಂಚಿದ್ದ ಭಾಗ್ಯಶ್ರೀ ಏಕಾಏಕಿ ಸಿನಿ ಜರ್ನಿಗೆ ಗುಡ್ ಬೈ ಹೇಳಿದ್ದರು.
7/ 13
ಇದರ ನಡುವೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮುದ್ದು ಮುಖದ ಚೆಲುವೆ ಕನ್ನಡ ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
8/ 13
1997ರಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ 'ಅಮ್ಮಾವ್ರ ಗಂಡ' ಸಿನಿಮಾದಲ್ಲಿ ಭಾಗ್ಯಶ್ರೀ ನಾಯಕಿಯಾಗಿದ್ದರು.
9/ 13
ಶಿವಣ್ಣನ ಜೊತೆ ನಾಯಕಿಯಾಗಿ ಕಮಾಲ್ ಮಾಡಿದ್ದರೂ ಅವಕಾಶಗಳ ವಿಷಯದಲ್ಲಿ ಭಾಗ್ಯಶ್ರೀಗೆ ಭಾಗ್ಯವಿರಲಿಲ್ಲ ಎನ್ನಬಹುದು.
10/ 13
ಹೀಗಾಗಿ ಮತ್ತೆ ಬಾಲಿವುಡ್ನತ್ತ ಮುಖ ಮಾಡಿದ್ದ ನಟಿ, ಹಿಂತಿರುಗಿದ್ದು 2006 ರಲ್ಲಿ. ಶಿವಣ್ಣ 'ಗಂಡುಗಲಿ ಕುಮಾರರಾಮ' ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಚಿತ್ರ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿರಲಿಲ್ಲ.
11/ 13
ಆ ಬಳಿಕ ಸಿನಿರಂಗದಿಂದ ದೂರವೇ ಉಳಿದಿದ್ದ ನಟಿ ಕಳೆದ ವರ್ಷ ಬಿಡುಗಡೆಯಾದ ನಿಖಿಲ್ ಕುಮಾರಸ್ವಾಮಿ ನಟನೆಯ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
12/ 13
ಇದೀಗ ಮತ್ತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಭಾಗ್ಯಶ್ರೀ ಜಾನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.
13/ 13
ಪ್ರಭಾಸ್ ಅಭಿನಯದ 20ನೇ ಚಿತ್ರವು 2020 ರಲ್ಲೇ ಬಿಡುಗಡೆಯಾಗಲಿದ್ದು, 20 ಲೆಕ್ಕಚಾರದೊಂದಿಗೆ 'ಅಮ್ಮಾವ್ರ ಗಂಡ' ನಾಯಕಿಯ ಅದೃಷ್ಟ ಬದಲಾಗಲಿದೆಯೇ ಕಾದು ನೋಡಬೇಕಿದೆ.