ಕಥೆ ಹೇಳುತ್ತೇನೆಂದು ಲೈಂಗಿಕ ಕಿರುಕುಳ ನೀಡಿದ ನಿರ್ದೇಶಕ; ಅಹಿತಕರ ಘಟನೆ ಬಿಚ್ಚಿಟ್ಟ ನಟಿ
ಸಾಕಷ್ಟು ನಟಿಯರು ತಮ್ಮ ಮೇಲೆ ನಡೆದ ಅಹಿತಕರ ಘಟನೆಗಳನ್ನು ಮೀಟೂ ಮೂಲಕ ಬೆಳಕಿಗೆ ತಂದಿದ್ದಾರೆ. ಇದೀಗ ಬೆಂಗಾಳಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ ನಿರ್ದೇಶಕರೊಬ್ಬರ ಮುಖವಾಡವನ್ನು ಕಳಚಿದ್ದಾರೆ.
ಮೀಟೂ ಅಭಿಯಾನದ ನಂತರ ಸಿನಿ ರಂಗದಲ್ಲಿ ಅನೇಕ ನಿರ್ದೇಶಕ, ನಿರ್ಮಾಪಕ, ನಟರ ಮುಖವಾಡಗಳು ಕಳಚಿವೆ. ನಟಿಯರು ತಮ್ಮ ಮೇಲಿನ ಅಹಿತಕರ ಘಟನೆಯನ್ನು ಹೇಳಲು ಇದನ್ನು ವೇದಿಕೆಯನ್ನಾಗಿ ಬಳಸುತ್ತಿದ್ದಾರೆ.
2/ 12
ಸಾಕಷ್ಟು ನಟಿಯರು ತಮ್ಮ ಮೇಲೆ ನಡೆದ ಅಹಿತಕರ ಘಟನೆಗಳನ್ನು ಮೀಟೂ ಮೂಲಕ ಬೆಳಕಿಗೆ ತಂದಿದ್ದಾರೆ. ಇದೀಗ ಬೆಂಗಾಳಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ ನಿರ್ದೇಶಕರೊಬ್ಬರ ಮುಖವಾಡವನ್ನು ಕಳಚಿದ್ದಾರೆ.
3/ 12
ಬೆಂಗಾಳಿ ನಟಿ ರೂಪಾಂಜನ ಮಿತ್ರಾ ಅವರಿಗೆ ಖ್ಯಾತ ನಿರ್ದೇಶಕ ಅರಿಂದಂ ಸಿಲ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.
4/ 12
ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾದ ವೇಳೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಧಾರವಾಹಿ ಕಥೆ ಹೇಳುತ್ತೇನೆಂದು ಕಚೇರಿಗೆ ಕರೆಸಿ ನನ್ನ ಬಳಿ ಅಭ್ಯವಾಗಿ ವರ್ತಿಸಿದ್ದರು ಎಂದು ನಡೆದ ಘಟನೆಯನ್ನು ಹೇಳಿದ್ದಾರೆ.
5/ 12
ನಿರ್ದೇಶಕ ಅರಿಂದಂ ‘ಭೂಮಿ ಕನ್ಯಾ‘ ಧಾರಾವಾಹಿಯ ಸ್ಕ್ರಿಪ್ಟ್ ಓದಲು ಕೊಲ್ಕಾತ್ತಾದ ಕಚೇರಿಗೆ ಬನ್ನಿ ಎಂದು ಹೇಳಿದ್ದರು. ಹಾಗಾಗಿ ನಾನು ಅವರ ಕಚೇರಿಗೆ ಹೋಗಿದ್ದೆ. ಕಚೇರಿ ತಲುಪಿದಾಗ 5 ಗಂಟೆಯಾಗಿತ್ತು ಎಂದರು.
6/ 12
ನಾನು ಆಫೀಸಿಗೆ ಹೋದಾಗ ನಿರ್ದೆಶಕ ಅರಿಂದಂ ಮತ್ತು ನನ್ನನ್ನು ಬಿಟ್ಟರೆ ಬೇರಾರು ಇರಲಿಲ್ಲ. ನನಗೆ ಆತಂಕದ ಜೊತೆಗೆ, ಭಯ ಹೆಚ್ಚಾಯಿತು. ನಂತರ ಅವರು ಸ್ಕ್ರಿಪ್ಟ್ ಬಗ್ಗೆ ಮಾತು ಆರಂಭಿಸಿದರು.
7/ 12
ಸ್ಕ್ರಿಪ್ಟ್ ಬಗ್ಗೆ ಹೇಳುತ್ತಾ ತಕ್ಷಣ ಸೀಟಿನಿಂದ ಎದ್ದು ನನ್ನ ಹಿಂದೆ ಬಂದು ನಿಂತರು. ತಲೆ ಮತ್ತು ಬೆನ್ನ ಮೇಲೆ ಕೈಯಿಟ್ಟು ಸವರಲು ಪ್ರಾರಂಭಿಸಿದರು. ನನಗೆ ಭಯ ಹೆಚ್ಚಾಯಿತು. ಯಾರಾದರು ಬರಬಾರದೇ ಎಂದು ಮನಸ್ಸಿನಲ್ಲಿ ಪ್ರಾರ್ಥಿಸುತ್ತಿದ್ದೆ ಎಂದು ಘಟನೆ ವಿವರಿಸಿದರು.
8/ 12
ನಿರ್ದೇಶಕ ಅರಿಂದಂ ಅವರ ವರ್ತನೆ ನನಗೆ ಬೇಸರ ಮೂಡಿಸಿತ್ತು. ನಾನು ಜೋರಾಗಿ ಸ್ಕ್ರಿಪ್ಟ್ ಬಗ್ಗೆ ಹೇಳಿ ಎಂದು ಕೂಗಿದೆ. ನನ್ನ ಧ್ವನಿ ಅವರಿಗೆ ಈ ಹುಡುಗಿ ಅಂತವಳಲ್ಲ ಎಂಬ ಸಂದೇಶ ನೀಡಿರಬೇಕು. ತಕ್ಷಣ ಅವರು 5 ನಿಮಿಷದಲ್ಲಿ ಸ್ಕ್ರಿಪ್ ಓದಿ ಮುಗಿಸಿದರು. ಅಷ್ಟರಲ್ಲಿ ಅವರ ಪತ್ನಿ ಅಲ್ಲಿಗೆ ಬಂದರು.
9/ 12
ಈ ಘಟನೆಯಿಂದ ನೊಂದ ನಾನು ಮನೆಗೆ ತಲುಪುವ ಮಧ್ಯ ರಸ್ತೆಯಲ್ಲಿ ಕುಸಿದು ಬಿದ್ದಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
10/ 12
ಇಷ್ಟು ದಿನ ಈ ವಿಚಾರವನ್ನು ಯಾಕೆ ಬಹಿರಂಗ ಪಡಿಸಿಲ್ಲ ಎಂಬ ನಿರೂಪಕನ ಪ್ರಶ್ನೆಗೆ ನಟಿ ನಿರಾಂಜನ ‘ನಾನು ಇಲ್ಲಿಯವರೆಗೆ ಟಿವಿ ವಾಹಿನಿಯ ಜೊತೆ ಒಪ್ಪಂದದಲ್ಲಿದ್ದೆ ಹಾಗಾಗಿ ಎಲ್ಲಿಯೂ ಹೇಳಿಕೊಳ್ಳಲು ಸಾಧ್ಯವಾಗಿಲ್ಲ‘ ಎಂದು ಹೇಳಿದ್ದಾರೆ.
11/ 12
ನಟಿ ರೂಪಾಂಜನ ಅವರ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಅರಿಂದಂ ‘ಇದೊಂದು ರಾಜಕೀಯ ಪ್ರೇರಿತ ಆರೋಪ. ನನಗೆ ಗೊತ್ತಿಲ್ಲ.. ಯಾಕೆ ನಟಿ ರೂಪಾಂಜನ ಮಿತ್ರಾ ನನ್ನ ಮೇಲೆ ಹೀಗೆಲ್ಲಾ ಆರೋಪಿಸುತ್ತಿದ್ದಾರೆಂದು.
12/ 12
ರೂಪಾಂಜನ ಮಿತ್ರಾ ನನ್ನ ಕಥೆ ಕೇಳಿ ಕಚೇರಿಯಿಂದ ಹೋದ ಮೇಲೆ ‘ನಾನು ನಿಮ್ಮ ಜೊತೆ ಕೆಲಸ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ‘ ಎಂದು ಮೆಸೇಜ್ ಮಾಡಿದ್ದಾರೆ. ಆ ಮೆಸೇಜ್ ಇಂದಿಗೂ ನನ್ನ ಬಳಿ ಇದೆ. ಅದನ್ನು ನಾನು ತೋರಿಸಬಲ್ಲೆ. ನಾನು ಆಕೆಯ ಮೇಲೆ ಅಸಭ್ಯವಾಗಿ ವರ್ತಿಸಿದರೆ ಆಕೆ ನನಗೆ ಯಾಕೆ ಮೆಸೇಜ್ ಮಾಡುತ್ತಿದ್ದಳು ಎಂದು ಹೇಳಿದ್ದಾರೆ.