Pooja Hegde: ಬೀಸ್ಟ್ ನಿರ್ಮಾಪಕರು ಕೊಟ್ಟ ಗಿಫ್ಟ್ ಕಂಡು ಪೂಜಾ ಕಕ್ಕಾಬಿಕ್ಕಿ! ದೌಲತ್ತು ಇಳಿಸಿದ್ದಾರೆ ಬಿಡಿ ಅಂತಿದ್ದಾರೆ ನೆಟ್ಟಿಗರು
ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ಟೈಮ್ ಚೆನ್ನಾಗಿಲ್ಲ. ಆಕೆ ಸತತವಾಗಿ ನಟಿಸಿದ ಮೂರು ಬಿಗ್ ಪ್ರಾಜೆಕ್ಟ್ ಸಿನಿಮಾಗಳು ಕೂಡ ಮಕಾಡೆ ಮಲಗಿದೆ. ರಾಧೆ ಶ್ಯಾಮ್, ಆಚಾರ್ಯ ಮತ್ತು ಬೀಸ್ಟ್ ಕೂಡ ಫ್ಲಾಪ್ ಆಗಿದೆ.
ಟಾಲಿವುಡ್ನ ಟಾಪ್ ಹೀರೋಯಿನ್ಗಳ ಪಟ್ಟಿಗೆ ಪೂಜಾ ಹೆಗ್ಡೆ ಕೂಡ ಸೇರಿಕೊಂಡಿದ್ದಾರೆ. ಕೆಲವು ಚಿತ್ರಗಳು ಹಿಟ್ ಆಗಿದ್ದರೂ, ಕೆಲವು ಫ್ಲಾಪ್ ಆಗಿದ್ದರೂ, ಮಾರ್ಕೆಟ್ ಮಾತ್ರ ಕಡಿಮೆಯಾಗಿಲ್ಲ, ತೆಲುಗು ಮತ್ತು ತಮಿಳು ಎರಡರಲ್ಲೂ ಅವಕಾಶಗಳು ಬರುತ್ತಲೇ ಇವೆ.
2/ 8
ನಾಗ ಚೈತನ್ಯ ನಾಯಕನಾಗಿ ನಟಿಸಿದ್ದ "ಒಕ ಲೈಲಾ ಕೋಸಂ" ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೂಜಾ ಹೆಗ್ಡೆ ನಂತರ ತೆಲುಗಿನ ಎಲ್ಲಾ ಖ್ಯಾತ ನಾಯಕರ ಜೊತೆ ನಟಿಸಿದ್ದರು. ರಾಮ್ ಚರಣ್, ಅಲ್ಲು ಅರ್ಜುನ್, ಮಹೇಶ್ ಬಾಬು ಮುಂತಾದ ಸ್ಟಾರ್ ಹೀರೋಗಳಿಗೆ ಜೋಡಿಯಾಗಿದ್ದಾರೆ.
3/ 8
ಆದರೆ, ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ಟೈಮ್ ಚೆನ್ನಾಗಿಲ್ಲ. ಆಕೆ ಸತತವಾಗಿ ನಟಿಸಿದ ಮೂರು ಬಿಗ್ ಪ್ರಾಜೆಕ್ಟ್ ಸಿನಿಮಾಗಳು ಕೂಡ ಮಕಾಡೆ ಮಲಗಿದೆ. ರಾಧೆ ಶ್ಯಾಮ್, ಆಚಾರ್ಯ ಮತ್ತು ಬೀಸ್ಟ್ ಕೂಡ ಫ್ಲಾಪ್ ಆಗಿದೆ.
4/ 8
ಆದ್ರೆ ಇತ್ತೀಚೆಗಷ್ಟೇ ಪೂಜಾಗೆ ಶಾಕ್ ಕೊಟ್ಟಿದ್ದಾರೆ ನಿರ್ಮಾಪಕರು. ಪೂಜಾ ಶೂಟಿಂಗ್ ಸ್ಥಳಕ್ಕೆ ಒಬ್ಬ ಅಥವಾ ಇಬ್ಬರು ಸಹಚರರನ್ನು ಜೊತೆ ಬರ್ತಿದ್ದರು. ಆದರೆ ಈಗ ಹತ್ತಾರು ಮಂದಿಯನ್ನು ಶೂಟಿಂಗ್ ಸ್ಥಳಕ್ಕೆ ಕರೆತರುತ್ತಿದ್ದಾರಂತೆ.
5/ 8
ಮೇಲಾಗಿ ಪೂಜಾ ಸಂಭಾವನೆಯ ವಿಚಾರದಲ್ಲೂ ಬದಲಾಗಿದ್ದಾರೆ. ಸಂಭಾವನೆಯನ್ನು ಭಾರಿ ಹೆಚ್ಚಿಸಿಕೊಂಡಿದ್ದಾರೆ. ಈ ವಿಚಾರವಾಗಿ ತಮಿಳು ನಿರ್ದೇಶಕ ಆರ್ ಕೆ ಸೆಲ್ವಮಣಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.
6/ 8
ಇತ್ತೀಚೆಗಷ್ಟೇ ಆಕೆಗೆ ಕನ್ಸ್ಟ್ರಕ್ಷನ್ ಕಂಪನಿಯೊಂದರ ಮ್ಯಾನೇಜರ್ಗಳು ಶಾಕ್ ನೀಡಿದ್ದಾರೆ. ಆಕೆ ಜೊತೆ ಬರುತ್ತಿದ್ದ ಸಿಬ್ಬಂದಿ ವೆಚ್ಚಗಳ ಬಿಲ್ಗಳನ್ನು ಪೂಜಾ ಹೆಗ್ಡೆ ಮನೆಗೆ ಕಳುಹಿಸಿದ್ದಾರೆ ನಿರ್ಮಾಪಕರು. ನೀವೇ ನಿಮ್ಮ ಸಿಬ್ಬಂದಿ ವೆಚ್ಚದ ಬಿಲ್ ಕಟ್ಟಿ ಎಂದು ಹೇಳಿದ್ದಾರಂತೆ.
7/ 8
ಈ ಬಿಲ್ ಕಂಡು ಪೂಜಾ ಕಕ್ಶಾಬಿಕ್ಕಿಯಾಗಿದ್ದಾರಂತೆ.. ಈಗಾಗಲೇ ಫ್ಲಾಪ್ ಸಿನಿಮಾಗಳು.. ಫ್ಲಾಪ್ ಹೀರೋಯಿನ್ ಎಂದು ಟ್ರೋಲಿಂಗ್ ಎದುರಿಸುತ್ತಿರುವ ಪೂಜಾ ಈಗ ನಿರ್ಮಾಪಕರು ಕೂಡ ಇಂತಹದೊಂದು ಶಾಕ್ ನೀಡುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
8/ 8
ಪೂಜಾ ಹೆಗ್ಡೆ ಮತ್ತು ಅವರ ಸಿಬ್ಬಂದಿ ಇನ್ನೂ ನಷ್ಟದಲ್ಲಿರುವ ಬೀಸ್ಟ್ ಚಿತ್ರ ನಿರ್ಮಾಪಕರ ಮೇಲೆ ಹೊರೆಯಾಗಿದ್ದರು. ಇದೀಗ ಆ ಹೊರೆಯನ್ನು ಅವರು ಇಳಿಸಿಕೊಂಡಿದ್ದಾರೆ.