ರಜನಿಕಾಂತ್​ ಜೊತೆ ಶೂಟಿಂಗ್​ ಪೂರ್ಣಗೊಳಿಸಿದ ಬೇರ್​ ಗ್ರಿಲ್ಸ್​; ಶೀಘ್ರವೇ ಪ್ರಸಾರವಾಗಲಿದೆ ಮ್ಯಾನ್​ vs ವೈಲ್ಡ್​

ಕರ್ನಾಟಕದ ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ಮ್ಯಾನ್ vs ವೈಲ್ಡ್ ಶೂಟಿಂಗ್ ನಡೆದಿದೆ. ನಿರೂಪಕ ಬೇರ್ ಗ್ರಿಲ್ಸ್ ಜೊತೆ ಸೂಪರ್ ಸ್ಟಾರ್ ರಜಿನಿಕಾಂತ್ ಪಾಲ್ಗೊಂಡಿದ್ದರು. ಶೀಘ್ರದಲ್ಲೇ ಇದು ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಬೇರ್​ ಗ್ರಿಲ್ಸ್​ ಟ್ವಿಟ್ಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ಮೊದಲು ಡಿಸ್ಕವರಿ ವಾಹಿನಿಯ ಕಾರ್ಯಕ್ರಮ ಮ್ಯಾನ್​ ವರ್ಸಸ್​​ ವೈಲ್ಡ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದರು.

First published: