Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

ಸ್ಯಾಂಡಲ್​ವುಡ್​ ನಿರ್ಮಾಪಕ ಉಮಾಪತಿ ಗೌಡ ಅವರು ಬಿಡಿಎ ಜಾಗ ಗುಳಂ ಮಾಡಿಬಿಟ್ರಾ? ಮದಗಜ ಪ್ರೊಡ್ಯೂಸರ್​ಗೆ ಬಿಡಿಎ ನೋಟಿಸ್ ಕಳುಹಿಸಿದೆ.

First published:

  • 17

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಮದಗಜ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ಬಿಡಿಎ ನೋಟಿಸ್ ಕೊಟ್ಟಿದೆ. HSR ಲೇಔಟ್​ನ 3ನೇ ಸೆಕ್ಟರ್​​ನಲ್ಲಿರುವ ಬಿಡಿಎನ 6 ನಿವೇಶನವನ್ನು ನಿರ್ಮಾಪಕ ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    MORE
    GALLERIES

  • 27

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಸ್ಯಾಂಡಲ್​ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೌಡ ವಿರುದ್ಧ ಬಿಡಿಎ ಸೈಟ್ ಒತ್ತುವರಿ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಡಿಎ ನೋಟಿಸ್ ಕೂಡಾ ಜಾರಿ ಮಾಡಿದೆ. 8 ದಿನಗಳ ಒಳಗೆ ಈ ನೋಟಿಸ್​ಗೆ ಉತ್ತರಿಸುವಂತೆ ಸೂಚನೆ ಕೊಡಲಾಗಿದೆ.

    MORE
    GALLERIES

  • 37

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಎಚ್​​ಎಸ್​​ಆರ್ ಲೇ ಔಟ್​ನ 3ನೇ ಸೆಕ್ಟರ್​​ನಲ್ಲಿರುವ ಬಿಡಿಎನ 6 ನಿವೇಶನ ಜಾಗ 1,545 ಚದರ ಮೀಟರ್ ವಿಸ್ತೀರ್ಣ ಇದೆ. ಈಗ ಮಾಡಿರುವ ಒತ್ತುವರಿ ತೆರವು ಮಾಡುವಂತೆ ಸೂಚಿಸಲಾಗಿದೆ.

    MORE
    GALLERIES

  • 47

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಒತ್ತುವರಿ ಮಾಡಿರುವ ನಿವೇಶನ ತೆರವು ಮಾಡಲು ಅನುಮತಿ ಕೊಡಬೇಕು ಎಂದು ಬಿಡಿಎ ಆಯುಕ್ತರಿಗೆ ಇಂಜಿನಿಯರ್ ದಾಖಲೆ ರವಾನಿಸಿದ್ದರು. ಒತ್ತುವರಿ ತೆರವು ಮಾಡುವ ಮುನ್ನ ಉಮಾಪತಿಗೆ ನೋಟೀಸ್ ನೀಡಲಾಗಿದೆ.

    MORE
    GALLERIES

  • 57

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಒತ್ತುವರಿ ಮಾಡಿಕೊಂಡಿರುವ ಜಾಗ ನಿಮಗೆ ಸಂಬಂಧಿಸಿದ್ದು ಎಂಬುದನ್ನು ಸಾಬೀತುಪಡಿಸುವ ದಾಖಲೆ ನೀಡುವಂತೆ ಉಮಾಪತಿಗೆ ಸೂಚಿಸಲಾಗಿದೆ. ಫೆ.15ರ ಒಳಗೆ ದಾಖಲೆ ಸಲ್ಲಿಕೆ ಮಾಡದೆ ಹೋದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.

    MORE
    GALLERIES

  • 67

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಉಮಾಪತಿ ಅವರು ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕಳೆದ ವರ್ಷ ರಿಲೀಸ್ ಆದ ‘ಮದಗಜ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು.

    MORE
    GALLERIES

  • 77

    Umapathy Gowda: BDA ಸೈಟ್ ಗುಳುಂ ಮಾಡಿದ್ರಾ ಉಮಾಪತಿ? ಸ್ಯಾಂಡಲ್​ವುಡ್ ನಿರ್ಮಾಪಕನಿಗೆ ನೋಟಿಸ್

    ಉಮಾಪತಿ ನೋಟಿಸ್​ಗೆ ಸ್ಪಷ್ಟ ಉತ್ತರ ನೀಡದೆ ಇದ್ದಲ್ಲಿ ನಿವೇಶನ ತೆರವು ಕಾರ್ಯಾಚರಣೆ ನಡೆಯುವುದು ಪಕ್ಕಾ ಆಗಿದೆ. ಅವರು ಈ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

    MORE
    GALLERIES