ವಿದೇಶದಿಂದ ಬೃಹತ್ ಉಪಕರಣಗಳನ್ನು ತಂದಿರುವ ಬಾಲಕೃಷ್ಣ ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಹೊರಟಿದ್ದಾರೆ. ಇದಲ್ಲದೇ ಮಕ್ಕಳಿಗೆ ಮೂರು ತಿಂಗಳ ಕಾಲ ಉಚಿತ ಊಟ, ಅಗತ್ಯ ಔಷಧಗಳನ್ನು ನೀಡಲು ನಿರ್ಧರಿಸಿದ್ದಾರೆ. ತಾವು ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂಪುರಂನ ಜನರು ಹಾಗೂ ಉಭಯ ರಾಜ್ಯಗಳ ಜನರು ಈ ಸೇವೆಗಳನ್ನು ಬಳಸಿಕೊಳ್ಳುವಂತೆ ಯೋಜನೆ ರೂಪಿಸಿದ್ದಾರೆ.