ಇದು ಬಾಲಕೃಷ್ಣ ಅವರ 107ನೇ ಚಿತ್ರ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ನಲ್ಲಿ ಬಹಳ ಪ್ರತಿಷ್ಠೆಯಿಂದ ತಯಾರಾದ ಈ ಸಿನಿಮಾದಲ್ಲಿ ಬಾಲಯ್ಯ ಜೊತೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಹನಿ ರೋಸ್, ವರಲಕ್ಷ್ಮಿ ಶರತ್ ಕುಮಾರ್, ಕನ್ನಡ ಸ್ಟಾರ್ ದುನಿಯಾ ವಿಜಯ್, ಮಲಯಾಳಂ ನಟ ಲಾಲ್, ನವೀನ್ ಚಂದ್ರ, ಮುರಳಿ ಶರ್ಮಾ, ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.