ಅವರ ಮೆದುಳಿನ ಕಾರ್ಯವನ್ನು ಸುಧಾರಿಸುವ ಮೂಲಕ ಕೋಮಾದಿಂದ ಹೊರತರಲು ವೈದ್ಯರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಮಧ್ಯದಲ್ಲಿ ಕೊಂಚ ಚೇತರಿಸಿಕೊಂಡಂತೆ ಕಂಡರೂ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ತಾರಕರತ್ನ ಅವರ ಎಲ್ಲಾ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮೆದುಳಿನ ಕಾರ್ಯಚಟುವಟಿಕೆ ಸುಧಾರಿಸದಿರುವುದು ಆತಂಕಕಾರಿಯಾಗಿದೆ.