ನಟಿ ಆಶ್ರಿತಾ ವೇಮಗಂಟಿ ಎಂದರೆ ಯಾರಿಗೂ ಗೊತ್ತಿರಲ್ಲ. ಅದರ ಬದಲು ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದಲ್ಲಿ ಅನುಷ್ಕಾ ಶೆಟ್ಟಿಯವರ ಅತ್ತಿಗೆ ಪಾತ್ರದಲ್ಲಿ ಅಭಿನಯಿಸಿದ ನಟಿ ಎಂದರೆ ಒಂದಷ್ಟು ಮಂದಿಗೆ ಆದರೂ ನೆನಪಿಗೆ ಬರಬಹುದು.
2/ 10
ಇನ್ನು ಸ್ಪಷ್ಟವಾಗಬೇಕಿದ್ದರೆ ಬಾಹುಬಲಿ ಚಿತ್ರದ 'ಕಣ್ಣನಿದುರಿಂಚರಾ' ಎಂಬ ಹಾಡಿನಲ್ಲಿ ಅನುಷ್ಕಾ ಅವರೊಂದಿಗೆ ಹೆಜ್ಜೆ ಹಾಕಿರುವ ನಟಿಯೇ ಆಶ್ರಿತಾ ವೇಮಗಂಟಿ.
3/ 10
ಟಾಲಿವುಡ್ನಲ್ಲಿ ಅಭಿನಯಿಸಿದ್ದು ಬೆರಳಣಿಕೆಯ ಚಿತ್ರಗಳಲ್ಲಿ ಆದರೂ ಆಶ್ರಿತಾ ಮಾಡಿದ ಪಾತ್ರಗಳು ಮಾತ್ರ ಎಲ್ಲರ ಗಮನ ಸೆಳೆದಿತ್ತು. ಅದು ಬಾಹುಬಲಿ ಚಿತ್ರದ ಪಾತ್ರವಾಗಲಿ, ಇಲ್ಲ ಯಾತ್ರಾ ಚಿತ್ರದ ವಿಜಯಮ್ಮನ ರೋಲ್ ಆಗಿರಲಿ.
4/ 10
ಹೀಗೆ ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿರುವ ಸರಳ ನಟಿ ಎಂದೇ ಖ್ಯಾತಿ ಪಡೆದಿದ್ದ ಆಶ್ರಿತಾ ಅವರ ಘನತೆಗೆ ಕೊಳ್ಳಿ ಹಿಡುವ ಪ್ರಯತ್ನಕ್ಕೆ ಕಿಡಿಗೇಡಿಗಳು ಮುಂದಾಗಿದ್ದಾರೆ.
5/ 10
ಸೋಷಿಯಲ್ ಮೀಡಿಯಾದಲ್ಲಿ ಡೇಟಿಂಗ್ ಆ್ಯಪ್ಗಳದ್ದೇ ಕಾರುಬಾರು. ಭಾರತದಲ್ಲೇ ಇಂದು ಹತ್ತಾರು ಡೇಟಿಂಗ್ ಅಪ್ಲಿಕೇಶನ್ಗಳು ತಲೆಯೆತ್ತಿಕೊಂಡಿವೆ. ಇಂತಹ ಆ್ಯಪ್ಗಳಲ್ಲಿ ಡೇಟ್ ಮಾಡಲು ಇಚ್ಛಿಸುವವರು ಅಕೌಂಟ್ ಓಪನ್ ಮಾಡುತ್ತಾರೆ.
6/ 10
ಆದರೆ ನಟಿ ಆಶ್ರಿತಾ ಅವರಿಗೆ ಗೊತ್ತಿಲ್ಲದಂತೆ ಯಾರೋ ಇವರ ಖಾತೆ ತೆರೆದು ಫೋಟೋಗಳನ್ನು ಡೇಟಿಂಗ್ ಆ್ಯಪ್ನಲ್ಲಿ ಹರಿಬಿಟ್ಟಿದ್ದಾರೆ. ಆರಂಭದಲ್ಲಿ ಅನೇಕರು ಇದು ಅಸಲಿ ಅಕೌಂಟ್ ಎಂದೇ ಭಾವಿಸಿದ್ದರು.
7/ 10
ಆ ಬಳಿಕ ಯಾರೋ ಪರಿಚಿತರು ನೋಡಿ ಆಶ್ರಿತಾ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೇ ನಟಿಯ ಅನೇಕ ಫೋಟೋಗಳು ಈ ಆ್ಯಪ್ನಲ್ಲಿ ಅಪ್ಲೋಡ್ ಆಗಿತ್ತು.
8/ 10
ಈ ವಿಷಯ ತಿಳಿಯುತ್ತಿದ್ದಂತೆ ನಟಿ ಆಘಾತಕ್ಕೊಳಗಾದರು. ಆ ಬಳಿಕ ಚೇತರಿಸಿಕೊಂಡ ನಟಿ ಫೋಟೋಗಳನ್ನು ದುರ್ಬಳಕೆ ಮಾಡಿದವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
9/ 10
ಈ ಬಗ್ಗೆ ಈಗಾಗಲೇ ಆಶ್ರಿತಾ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿರುವ ಇಂತಹ ಕಿಡಿಗೇಡಿಗಳ ಹುಡುಕಾಟಕ್ಕೆ ಸೈಬರ್ ಪೊಲೀಸರು ಕೂಡ ಸಜ್ಜಾಗಿದ್ದಾರೆ.
10/ 10
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಟಾಲಿವುಡ್ನಲ್ಲಿ ಸಭ್ಯ ನಟಿ ಎಂದು ಕರೆಸಿಕೊಂಡಿದ್ದ ಆಶ್ರಿತಾ ಅವರು ಮಾನಸಿಕ ನೋvಉ ಅನುಭವಿಸುವಂತಾಗಿರುವುದು ಮಾತ್ರ ವಿಪರ್ಯಾಸ.