Ayushmann Khurrana: ಬಣ್ಣದ ಲೋಕದಲ್ಲಿ ಇಂತಹದೊಂದು ಸಮಸ್ಯೆ ಕೇವಲ ನಟಿಮಣಿಯರಿಗೆ ಮಾತ್ರ ಎಂದು ನೀವಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದರೆ ಬಾಲಿವುಡ್ನ ಸ್ಟಾರ್ ನಟನಿಗೂ ಈ ರೀತಿಯ ಅನುಭವವಾಗಿದೆಯಂತೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ವಿರುದ್ಧ ಈಗಾಗಲೇ ಮೀಟೂ ಅಭಿಯಾನದ ಮೂಲಕ ಅನೇಕ ನಟಿಯರು ಧ್ವನಿಯೆತ್ತಿದ್ದಾರೆ.
2/ 9
ಬಣ್ಣದ ಲೋಕದಲ್ಲಿ ಇಂತಹದೊಂದು ಸಮಸ್ಯೆ ಕೇವಲ ನಟಿಮಣಿಯರಿಗೆ ಮಾತ್ರ ಎಂದು ನೀವಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದರೆ ಬಾಲಿವುಡ್ನ ಸ್ಟಾರ್ ನಟ ಆಯುಷ್ಮಾನ್ ಖುರಾನ ಚಿತ್ರರಂಗದಲ್ಲಿ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
3/ 9
ನಿರೂಪಕನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಆಯುಷ್ಮಾನ್ ಆ ಬಳಿಕ ಸಿನಿಲೋಕಕ್ಕೆ ಬಂದಿದ್ದರು. ಕಿರುತೆರೆಯಲ್ಲಿ ಹೆಸರು ಮಾಡಿದ್ದ ನನಗೆ ಬಿಗ್ ಸ್ಕ್ರೀನ್ ಅವಕಾಶ ಸುಲಭದಲ್ಲಿ ದಕ್ಕಿರಲಿಲ್ಲ.
4/ 9
ಕೆಲಸದ ನಡುವೆ ಸಮಯ ಹೊಂದಿಸಿ ನಾನು ಸಿನಿಮಾ ಆಡಿಷನ್ಗಾಗಿ ಹಾಜರಾಗುತ್ತಿದ್ದೆ. ಒಂದು ಬಾರಿ ಆಡಿಷನ್ಗೆ ಹೋದಾಗ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದರು.
5/ 9
ಆದರೆ ಒಂದು ಕಂಡೀಷನ್ ಹಾಕಿದ್ದರು. ಅದೇನೆಂದರೆ ನಿನ್ನ ಗುಪ್ತಾಂಗ ತೋರಿಸಬೇಕೆಂದಾಗಿತ್ತು. ನೀನು ಗುಪ್ತಾಂಗ ತೋರಿಸಿದ್ರೆ ನಮ್ಮ ಚಿತ್ರದ ಪಾತ್ರ ನಿನ್ನದಾಗಲಿದೆ ಎಂದಿದ್ದರು. ಅವರ ಮಾತು ಕೇಳಿ ನಾನು ಶಾಕ್ ಆದೆ.
6/ 9
ನೀವೇನು ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದೆ. ಅಲ್ಲದೆ ನಾನು ಸಲಿಂಗಿ ಅಲ್ಲ ಅಂತೇಳಿ ಅಲ್ಲಿಂದ ಹೊರಬಂದೆ ಎಂದು ಆಯುಷ್ಮಾನ್ ಖುರಾನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
7/ 9
ಆದರೆ ಅಂದು ತಮ್ಮಿಂದ ಗುಪ್ತಾಂಗ ನೋಡಬೇಕೆಂದು ಬಯಸಿ ನಿರ್ಮಾಪಕ ಯಾರೆಂಬುದನ್ನು ಬಹಿರಂಗಪಡಿಸಲು ಬಾಲಿವುಡ್ ನಟ ನಿರಾಕರಿಸಿದರು.
8/ 9
ಇದರ ಹೊರತಾಗಿ 2012 ರಲ್ಲಿ ನಟ ಜಾನ್ ಅಬ್ರಹಾಂ ನಿರ್ಮಿಸಿದ್ದ ವಿಕ್ಕಿ ಡೋನರ್ ಚಿತ್ರದಲ್ಲಿ ಆಯುಷ್ಮಾನ್ ಖುರಾನ ಅವಕಾಶ ಗಿಟ್ಟಿಸಿಕೊಂಡರು. ಆ ಬಳಿಕ ಹಿಂತಿರುಗಿ ನೋಡಿಲ್ಲ.
9/ 9
ಧಮ್ ಲಗಾಕೆ ಹೈಸಾ, ಮೇರಿ ಪ್ಯಾರಿ ಬಿಂದು, ಬರೇಲಿ ಕಿ ಬರ್ಫಿ, ಅಂಧಾದೂನ್, ಬದಾಯಿ ಹೋ, ಆರ್ಟಿಕಲ್, ಡ್ರೀಮ್ ಗರ್ಲ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಆಯುಷ್ಮಾನ್ ಸದ್ಯದ ಬಾಲಿವುಡ್ನ ಮೋಸ್ಟ್ ಸಕ್ಸಸ್ಫುಲ್ ನಟ ಎನಿಸಿಕೊಂಡಿದ್ದಾರೆ.