Ayra Yash: ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದಿನ ಮಗಳು ಐರಾ ಕ್ರಿಸ್ಮಸ್ ಸ್ಪೆಷಕ್ ಕುಕ್ಕೀಸ್ ತಯಾರಿಸಿದ್ದಾರೆ. ಸಂಪೂರ್ಣ ಗಮನ ಕೊಟ್ಟು ಮಗಳು ಕುಕ್ಕೀಸ್ ತಯಾರಿಸೋ ಫೋಟೋ ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್.
ಎಲ್ಲಾ ಕಡೆಗಳಲ್ಲಿ ಕ್ರಿಸ್ಮಸ್ ವೈಬ್ಸ್ ಶುರುವಾಗಿದೆ. ಡಿಸೆಂಬರ್ನಲ್ಲಿ ಅತ್ಯಂತ ಚಳಿಯ ಸಂದರ್ಭ ಕ್ರಿಸ್ಮಸ್ ಸೆಲೆಬ್ರೇಷನ್ ಶುರುವಾಗಿದ್ದು ಫೆಸ್ಟುವ್ ವೈಬ್ಸ್ ಜೋರಾಗಿದೆ.
2/ 7
ಈ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಮಗಳ ಸ್ಪೆಷಲ್ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಮಗಳು ಐರಾ ಕ್ರಿಸ್ಮಸ್ ಕುಕ್ಕೀಸ್ ತಯಾರಿಸೋದ್ರದಲ್ಲಿ ಬ್ಯುಸಿಯಾಗಿದ್ದಾಳೆ.
3/ 7
ಐರಾ ಯಶ್ ಫುಡ್ ಕಲರ್ಗಳಿಂದ ಕುಕ್ಕೀಸ್ ಅಲಂಕರಿಸಿದ್ದಾರೆ. ಸ್ಟಾರ್, ಕ್ರಿಸ್ಮಸ್ ಟ್ರೀ, ಸೇರಿ ಕ್ರಿಸ್ಮಸ್ಗೆ ಸಂಬಂಧಿಸಿದ ಹಲವು ಬಗೆಯ ವಸ್ತುಗಳ ಆಕಾರದಲ್ಲಿ ಕುಕ್ಕೀಸ್ ತಯಾರಿಸಿದ್ದಾರೆ.
4/ 7
ಐರಾ ಯಶ್ ಫುಲ್ ಗಮನ ಕೊಟ್ಟು ನೀಟಾಗಿ ಕುಕ್ಕೀಸ್ ಡೆಕೊರೇಟ್ ಮಾಡುವುದನ್ನು ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
5/ 7
ಇತ್ತೀಚೆಗಷ್ಟೇ ಐರಾ ಯಶ್ ಬರ್ತ್ಡೇ ಆಚರಿಸಲಾಗಿತ್ತು. ಯನಿಕಾರ್ನ್ ಥೀಮ್ನಲ್ಲಿ ಸಖತ್ ಸ್ಟೈಲಿಷ್ ಆಗಿ ಎಲ್ಲವನ್ನೂ ರೆಡಿ ಮಾಡಲಾಗಿತ್ತು.
6/ 7
ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಗಳ ಫೋಟೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಹಬ್ಬದ ಸಂದರ್ಭ ಸ್ಪೆಷಲ್ ಫೊಟೋಸ್ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ.
7/ 7
ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದಿನ ಮಗಳು ಐರಾ ಸ್ಯಾಂಡಲ್ವುಡ್ನ ಟಾಪ್ ಸೆಲೆಬ್ರಿಟಿ ಕಿಡ್ಗಳಲ್ಲಿ ಒಬ್ಬಳು. ಈಗಲೇ ಅಪಾರ ಅಭಿಮಾನಿಗಳಿದ್ದಾರೆ.