Ayra Yash: ಮುದ್ದು ಗೊಂಬೆಯಂತೆ ಮಿಂಚಿದ ಐರಾ! ಫ್ಯಾಮಿಲಿ ಜೊತೆ ಬರ್ತ್ಡೇ ಸೆಲೆಬ್ರೇಷನ್ ಹೀಗಿತ್ತು
ನಟಿ ರಾಧಿಕಾ ಪಂಡಿತ್ ಅವರು ಮಗಳು ಐರಾ ಬರ್ತ್ಡೇ ಸೆಲೆಬ್ರೇಷನ್ ಫೋಟೋಸ್ ಶೇರ್ ಮಾಡಿದ್ದಾರೆ. ಐರಾ ಮುದ್ದು ಗೊಂಬೆಯಂತೆ ಕಂಡು ಬಂದಿದ್ದು ಸಖತ್ ಕ್ಯೂಟ್ ಬಂದಿವೆ ಫೋಟೋಸ್.
1/ 7
ಐರಾ ಬರ್ತ್ಡೇ ಸೆಲೆಬ್ರೇಷನ್ ಫೋಟೋಗಳನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಐರಾ ಕ್ಯೂಟ್ ಆಗಿ ಕಾಣಿಸಿದ್ದಾಳೆ.
2/ 7
ಚಂದದ ಕಲರ್ಫುಲ್ ಫ್ರಾಕ್ ಧರಿಸಿದ್ದ ಐರಾ ಅಪ್ಪ ಅಮ್ಮ ಹಾಗೂ ತಮ್ಮ ಮತ್ತು ಫ್ಯಾಮಿಲಿ ಜೊತೆ ಖುಷಿಯಾಗಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾಳೆ.
3/ 7
ಯಶ್ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಂಡುಬಂದರೆ ರಾಧಿಕಾ ಪಂಡಿತ್ ಆಕಾಶ ನೀಲಿ ಬಣ್ಣದ ಡ್ರೆಸ್ ಧರಿಸಿದ್ದರು. ಸುಂದರವಾಗಿ ಕಲರ್ಫುಲ್ ಬಲೂನ್ ಡೆಕೊರೇಷನ್ ಮಾಡಲಾಗಿತ್ತು.
4/ 7
ತಲೆಯ ಮೇಲೆ ಯುನಿಕಾರ್ನ್ ಶೈಲಿಯ ಹೇರ್ಬ್ಯಾಂಡ್ ಧರಿಸಿ ಐರಾ ಮುದ್ದಾಗಿ ಕಾಣಿಸಿದ್ದು ನೆಟ್ಟಿಗರು ಬರ್ತ್ಡೇ ವಿಶ್ ಕಾಮೆಂಟ್ ಮಾಡಿದ್ದಾರೆ.
5/ 7
ಐರಾ ಬರ್ತ್ಡೇಗೆ ಮಾಡಲಾಗಿದ್ದ ವಿಶೇಷ ಯುನಿಕಾರ್ನ್ ಥೀಮ್ ಡೆಕೊರೇಷನ್ ಹೀಗಿತ್ತು.
6/ 7
ಐರಾ 4ನೇ ವರ್ಷದ ಬರ್ತ್ಡೇ ಆಚರಿಸಿದ್ದು ಯಶ್ ಅವರೂ ಮಗಳ ಬರ್ತ್ಡೇ ಸಂದರ್ಭ ತಮ್ಮ ಬ್ಯುಸಿ ಕೆಲಸಗಳನ್ನು ಬಿಟ್ಟು ಫ್ಯಾಮಿಲಿ ಜೊತೆ ಸೇರಿಕೊಂಡಿದ್ದರು.
7/ 7
ಬರ್ತ್ಡೇ ಸೆಲೆಬ್ರೇಷನ್ನಲ್ಲಿ ರಾಧಿಕಾ ಪಂಡಿತ್ ಮನೆಯವರೂ ಯಶ್ ಮನೆಯವರೂ ಭಾಗಿಯಾಗಿದ್ದರು.
First published: