ಅವತಾರ್: ದಿ ವೇ ಆಫ್ ವಾಟರ್ ಸಿನಿಮಾ ಮೂರು ವಾರಗಳನ್ನು ಪೂರೈಸಿದೆ. ಈಗಲೂ ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ಫುಲ್ ಪ್ರದರ್ಶನ ಕಾಣುತ್ತಿದೆ. ವೀಕ್ ಡೇಸ್ನಲ್ಲಿ ಕಲೆಕ್ಷನ್ನಲ್ಲಿ ಸ್ವಲ್ಪ ಕುಸಿತ ಕಂಡಿದೆ.
2/ 8
ಆದರೆ ವಾರಾಂತ್ಯದಲ್ಲಿ ಮತ್ತೆ ವೇಗವನ್ನು ಪಡೆದುಕೊಂಡಿದೆ. ಈ ಚಿತ್ರವು ಅವೆಂಜರ್ಸ್: ಎಂಡ್ಗೇಮ್ನ ಕಲೆಕ್ಷನ್ಗಳನ್ನು ಮೀರಿಸಿದೆ. ಭಾರತದಲ್ಲಿ 450 ಕೋಟಿ ರೂಪಾಯಿ ಗಳಿಸಿದ್ದು ವರದಿಗಳ ಪ್ರಕಾರ ಸಿನಿಮಾ ವಿಶ್ವಾದ್ಯಂತ 14,060 ಕೋಟಿ ರೂ. ಕಲೆಕ್ಷನ್ ಮಾಡಿದೆ.
3/ 8
ಟ್ರೇಡ್ ವರದಿಗಳ ಪ್ರಕಾರ ಅವತಾರ್: ದಿ ವೇ ಆಫ್ ವಾಟರ್ ಭಾರತದಲ್ಲಿ ಬಾಕ್ಸ್ ಆಫೀಸ್ನಲ್ಲಿ 450 ಕೋಟಿ ರೂಪಾಯಿ ಗಳಿಸಿ ಈಗಲೂ ಸಕ್ಸಸ್ಫುಲ್ ಆಗಿ ರನ್ ಆಗುತ್ತಿದೆ.
4/ 8
ಬಾಕ್ಸ್ ಆಫೀಸ್ನಲ್ಲಿ 24 ನೇ ದಿನದಂದು, ಭಾರತದಲ್ಲಿ ರೂ 7.50 ಕೋಟಿ ಲಾಭ ಗಳಿಸಲಿದೆ ಎನ್ನಲಾಗಿತ್ತು. ಆದರೆ ಇದು ಅದನ್ನು ಮೀರಿಸಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಚಿತ್ರವು ಅವೆಂಜರ್ಸ್: ಎಂಡ್ಗೇಮ್ನ ಕಲೆಕ್ಷನ್ ಮೀರಿಸಿರುವುದು ಗಮನಾರ್ಹ.
5/ 8
ಮುಂದಿನ ವಾರ ಅವತಾರ್ಗೆ ಸಾಕಷ್ಟು ನಿರ್ಣಾಯಕವಾಗಿದೆ. ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಬಹಳಷ್ಟು ಹಿಟ್ ಸಿನಿಮಾ ರಿಲೀಸ್ ಆಗಲಿದ್ದು ಇದು ಅವತಾರ್2 ಸಿನಿಮಾಗೆ ಎಫೆಕ್ಟ್ ಆಗಬಹುದು.
6/ 8
ದಶಕದ ನಂತರ ಅವತಾರ್ನ ಮುಂದುವರಿದ ಭಾಗ, ದಿ ವೇ ಆಫ್ ವಾಟರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸಿನಿಮಾ ವಿಶುವಲ್ ವಂಡರ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ.
7/ 8
ಜೇಮ್ಸ್ ಕ್ಯಾಮರೂನ್ ಅವರ ನಿರ್ದೇಶನದ ಅವತಾರ್: ದಿ ವೇ ಆಫ್ ವಾಟರ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ.
8/ 8
ಜನವರಿ ತಿಂಗಳಲ್ಲಿ ಕರ್ನಾಟಕದಲ್ಲಿ ಸಂಕ್ರಾತಿ, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭ ಬಹಳಷ್ಟು ಬಿಗ್ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿರುವುದರಿಂದ ಅವತಾರ್ ಓಟಕ್ಕೆ ಚಿಕ್ಕ ಬ್ರೇಕ್ ಬೀಳೋ ಸಾಧ್ಯತೆ ಇದೆ.