KGF2-Avatar2: ಅವತಾರ್2 ಭಾರತದಲ್ಲಿ ಎಷ್ಟೇ ಹಿಟ್ ಆದ್ರೂ ಕೆಜಿಎಫ್ 2 ರೆಕಾರ್ಡ್ ಬ್ರೇಕ್ ಮಾಡೋಕಾಗ್ಲಿಲ್ಲ ಅವತಾರ್ ಸಿನಿಮಾ ದೊಡ್ಡ ದಾಖಲೆ ಬರೆದಿದೆ. ಎಂಡ್ಗೇಮ್ ನಂತರ ಭಾರತದಲ್ಲಿ ಹೈಯೆಸ್ಟ್ ಗ್ರಾಸಿಂಗ್ ಮೂವಿ. ಆದರೂ ಮೊದಲ ಸಿನದ ಕಲೆಕ್ಷನ್ ವಿಚಾರದಲ್ಲಿ ಕೆಜಿಎಫ್2 ಸಿನಿಮಾವನ್ನು ಮೀರಿಸುವಲ್ಲಿ ಫೇಲ್ ಆಗಿದೆ ಅವತಾರ್ 2.
1 / 7
ಅವತಾರ್ 2 ಸಿನಿಮಾ ಬಿಡುಗಡೆಯಾಗಿ ಎರಡೇ ದಿನಕ್ಕೆ ವಿಶ್ಯಾದ್ಯಂತ ಬರೋಬ್ಬರಿ 1500 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಹೊಸ ದಾಖಲೆಗಳನ್ನೇ ಬರೆಯುತ್ತಿದೆ.
2 / 7
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಯಾಗಿತ್ತು. ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಯಿತು. ಇದು ಯಶ್ಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ತಂದುಕೊಟ್ಟಿತು.
3 / 7
ಅವತಾರ್ 2 ಸಿನಿಮಾ ಮೊದಲ ದಿನ ಭಾರತದಲ್ಲಿ 41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಸಿನಿಮಾ ಚೆನ್ನಾಗಿ ಓಡುತ್ತಿದೆ.
4 / 7
ಆದರೆ ಕೆಜಿಎಫ್ 2 ಸಿನಿಮಾ ಭಾರತದಲ್ಲಿ ಮೊದಲ ದಿನ ಗಳಿಸಿದ್ದು ಭರ್ಜರಿಯಾಗಿ 54 ಕೋಟಿ ರೂಪಾಯಿ. ಹಾಗಾಗಿ ಅವತಾರ್ 2 ಕೆಜಿಎಫ್ 2 ಬೀಟ್ ಮಾಡಲು ಸಾಧ್ಯವಾಗಿಲ್ಲ.
5 / 7
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸಿನಿಮಾ ಈಗ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇದು ಒಂದನೇ ಭಾಗಕ್ಕಿಂತಲೂ ಅದ್ಭುತವಾಗಿದೆ ಎಂದು ಹೇಳಲಾಗುತ್ತಿದೆ.
6 / 7
ಇನ್ನು ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮೂರನೇ ಸೀಕ್ವೆಲ್ ಬರುವ ಸಾಧ್ಯತೆಯ ಹಿಂಟ್ ಇದ್ದರೂ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಸದ್ಯ ಯಶ್ ಸ್ಮಾಲ್ ಬ್ರೇಕ್ ತೆಗೆದುಕೊಂಡಿದ್ದಾರೆ.
7 / 7
ಅವತಾರ್ ಸಿನಿಮಾಗಾಗಿ ಹೊಸ ಕ್ಯಾಮೆರಾವನ್ನೇ ಸೃಷ್ಟಿಸಲಾಗಿತ್ತು. ಈ ಮೂಲಕ ಎಲ್ಲವೂ ಹೈಕ್ಲಾಸ್ ಆಗಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು.
First published: December 19, 2022, 16:25 IST