ಅವತಾರ್ 2 ಸಿನಿಮಾ ಈ ಬಾರಿ ಸದ್ದು ಮಾಡಿತ್ತು. ಎಷ್ಟು ಗಳಿಸಿತು ಎನ್ನುವ ಪ್ರಶ್ನೆಗಳು ಎಲ್ಲೆಡೆ ಹರಿದಾಡ್ತಾ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅವತಾರ್ 2 ವಿಶ್ವದಾದ್ಯಂತ 16 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
2/ 8
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಅವತಾರ್ ಸಿನಿಮಾ ಹಿಟ್ ಆಗಿತ್ತು. ಈ ಸಿನಿಮಾ ನಂತರ ದಶಕಗಳ ಬಳಿಕ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ರಿಲೀಸ್ ಆಗಿತ್ತು. ಅದು ಈಗ ಯಶಸ್ಸು ಕಂಡಿದೆ.
3/ 8
ಕಳೆದ ವರ್ಷ ಡಿಸೆಂಬರ್ ನಲ್ಲಿ ಅವತಾರ್ 2 ರಿಲೀಸ್ ಆಗಿತ್ತು ಸಿನಿಮಾ ಇಲ್ಲಿಯವರೆಗೆ ಎರಡು ಬಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ರೂಪಾಯಿಯಲ್ಲಿ, 16,247 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
4/ 8
ಅವತಾರ್ ಸಿಕ್ವೇಲ್ಗೆ 'ದಿ ವೇ ಆಫ್ ವಾಟರ್' ಎಂದು ಹೆಸರಿಡಲಾಗಿದೆ. ಮೊದಲ ಸಿಕ್ವೇಲ್ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿದ್ದು, ವಿಚಿತ್ರ ಪ್ರಾಣಿಗಳನ್ನು ಪರಿಚಯಿಸಲಾಗಿದೆ.
5/ 8
'ಅವತಾರ್' ಸಿನಿಮಾದಿಂದ ಒಟ್ಟು ಐದು ಸಿಕ್ವೇಲ್ ಹೊರಬರಲಿವೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕಥೆ ಕಟ್ಟುವ ಬಗೆ, ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್, ವಿಶ್ಯುವಲ್ ಎಫೆಕ್ಟ್, ಆಕ್ಷನ್ ಸೀನ್, ಭಾವನಾತ್ಮಕ ವಿಷಯಗಳಿಗೆ ಈ ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
6/ 8
ಕೆಲವು ವಿಮರ್ಶಕರು ಸಿನಿಮಾದಲ್ಲಿ ಕೆಲವೊಂದು ತಪ್ಪುಗಳನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಮೂರು ಗಂಟೆಗಳ ಕಾಲದ ಸಿನಿಮಾದಲ್ಲಿ ಹೆಚ್ಚಿನವರು ಮೊದಲ ಚಿತ್ರಕ್ಕಿಂತಲೂ ಡೀಪ್ ಆಗಿರುವ ಎಫೆಕ್ಟಿವ್ ಆಗಿರುವಂತಹ ದೃಶ್ಯ ಪರಿಣಾಮಗಳು ಈ ಸಿನಿಮಾದಲ್ಲಿ ಇವೆ ಎಂದಿದ್ದಾರೆ.
7/ 8
ಸಿನಿಮಾ ಭಾರತದಲ್ಲಿ ಮೊದಲ ವಾರದಲ್ಲಿ 193 ಕೋಟಿ ರೂಪಾಯಿ ಕಲೆಕ್ಷನ್ ಗಳಿಸಿತ್ತು. ವಿಶ್ವದಾದ್ಯಂತ $600 ಮಿಲಿಯನ್ ದಾಟಿತ್ತು. ಈಗ 16 ಸಾವಿರ ಕೋಟಿ ಗಳಿಸಿದೆ.
8/ 8
ಈಗ ಅವತಾರ್ 3 ಬರೋಕೆ ರೆಡಿ ಆಗಿದೆ. 2024ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಒಟ್ಟು 5 ಕಥೆಗಳು ಬರಲಿವೆ.