BBK8: ಬಿಗ್ಬಾಸ್ ಪ್ರಸಾರ ಸಮಯ ಬದಲಾವಣೆಗೆ ಅಭಿಮಾನಿಗಳ ಬೇಡಿಕೆ
ಕನ್ನಡ ಬಿಗ್ಬಾಸ್ನ ಏಂಟನೇ ಆವೃತ್ತಿ ಪ್ರಸಾರಕ್ಕೆ ಇನ್ನೇನು ಎರಡು ದಿನ ಬಾಕಿ ಉಳಿದಿದೆ. ಫೆ. 28ರಂದು 17ಜನ ಸೆಲಿಬ್ರಿಟಿಗಳು ಮನೆ ಪ್ರವೇಶ ಮಾಡಲಿದ್ದಾರೆ. ಈ ಬಾರಿ ಮನೆ ಪ್ರವೇಶಿಸುವವರೆಲ್ಲಾ ಸೆಲೆಬ್ರಿಟಿಗಳೇ ಆಗಿರುವುದರಿಂದ ಕಾರ್ಯಕ್ರಮ ವೀಕ್ಷಣೆಗೆ ಜನರು ಕಾತುರರಾಗಿದ್ದಾರೆ. ಆದರೆ, ಬಿಗ್ಬಾಸ್ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿರುವುದು ಸಾಕಷ್ಟು ಜನರಲ್ಲಿ ಬೇಸರ ತರಿಸಿದೆ. (ಫೋಟೋ ಕೃಪೆ: ಪರಮೇಶ್ವರ್ ಗುಂಡ್ಕಲ್ ಇನ್ಸ್ಟಾಗ್ರಾಂ)