'ಮಾಸ್ಟರ್ ಪೀಸ್' ಚಿತ್ರ ನಿರ್ದೇಶಕ ಮಂಜು ಮಾಂಡವ್ಯ ಹೀರೋವಾಗಿ ಎಂಟ್ರಿ ಕೊಡುತ್ತಿರುವ ವಿಷಯ ಗೊತ್ತೇ ಇದೆ.
2/ 8
'ಭರತ ಬಾಹುಬಲಿ' ಎಂಬ ಚಿತ್ರವನ್ನು ನಿರ್ದೇಶಿಸಿ ನಾಯಕ ನಟನಾಗಿ ನಟಿಸಿ ಮಂಜು ಮಾಂಡವ್ಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
3/ 8
ಮಾಸ್ಟರ್ ಪೀಸ್ ಚಿತ್ರದ ಬ್ರೂಸ್ಲಿ ಚಿಕ್ಕಣ್ಣ ಇಲ್ಲೂ ಕೂಡ ಇರಲಿದ್ದು, ಜನವರಿಗೆ 17 ರಿಂದ ಪ್ರೇಕ್ಷಕರಿಗೆ ಭರತ ಬಾಹುಬಲಿಯನ್ನು ನೋಡಬಹುದು ಎಂದಿದ್ದಾರೆ.
4/ 8
ಆದರೆ ಅದಕ್ಕೂ ಮುನ್ನ ಚಿತ್ರ ನಿರ್ಮಾಪಕರಾದ ಟಿ. ಶಿವಪ್ರಕಾಶ್ ಚಿತ್ರಪ್ರೇಮಿಗಳಿಗೆ ಭರ್ಜರಿ ಆಫರ್ನ್ನು ನೀಡಿದ್ದಾರೆ. ಹೌದು, ಈ ಸಿನಿಮಾ ನೋಡುವವರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿಸಿದ್ದಾರೆ.
5/ 8
ಈ ಬಹುಮಾನದಲ್ಲಿ 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳು ಸೇರಿವೆ.
6/ 8
ಈ ಚಿತ್ರವನ್ನು ನೋಡಿದ 20 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಈ ಬಹುಮಾನ ಸಿಗಲಿದೆ. ಒಂದಾರ್ಥದಲ್ಲಿ ಸಿನಿಮಾ ಲಾಟರಿ ಆಫರ್ ಎನ್ನಬಹುದು.
7/ 8
ಭರತ ಬಾಹುಬಲಿ ಬಹುಮಾನ ಗೆಲ್ಲಲು ಪ್ರೇಕ್ಷಕರು ಮಾಡಬೇಕಿರುವುದು ಇಷ್ಟೇ. ಯಾವುದೇ ಚಿತ್ರಮಂದಿರದಲ್ಲಾದರೂ ಈ ಸಿನಿಮಾ ಟಿಕೆಟ್ ಕೊಡುವಾಗ ಕೂಪನ್ ಸಿಗಲಿದೆ.
8/ 8
ಆ ಕೂಪನ್ ಅನ್ನು ಲಕ್ಕಿ ಡಿಪ್ಗೆ ಹಾಕಬೇಕು. ಈ ರೀತಿಯ ಲಕ್ಕಿ ಡಿಪ್ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ 20 ಮಂದಿ ಅದೃಷ್ಟವಂತರಿಗೆ ಕಾರು ಹಾಗೂ ಚಿನ್ನದ ಆಭರಣಗಳು ಸಿಗಲಿವೆ.