Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

Attack on Naresh House: ಹಿರಿಯ ನಟ ನರೇಶ್ ಮನೆ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ನರೇಶ್​ ಮನೆಯಲ್ಲಿದ್ದ ವಾಹನಗಳು ಕೂಡ ಜಖಂಗೊಂಡಿದೆ. ಗಚ್ಚಿಬೌಲಿಯಲ್ಲಿರುವ ತಮ್ಮ ನಿವಾಸದ ಮೇಲೆ ನಡೆದ ಈ ಅನಿರೀಕ್ಷಿತ ದಾಳಿಯ ವಿರುದ್ಧ ನರೇಶ್ ಪೊಲೀಸ್ ದೂರು ದಾಖಲಿಸಿದ್ದಾರೆ.

First published:

  • 19

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ಹಿರಿಯ ನಟ ನರೇಶ್ ಮನೆ ಮೇಲೆ ಅಪರಿಚಿತರಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ನರೇಶ್ ಹಾಗೂ ಇತರೆ ವಾಹನಗಳು ಜಖಂಗೊಂಡಿವೆ. ಗಚ್ಚಿಬೌಲಿಯಲ್ಲಿರುವ ತಮ್ಮ ನಿವಾಸದ ಮೇಲೆ ನಡೆದ ಈ ದಾಳಿಯ ವಿರುದ್ಧ ನರೇಶ್ ಪೊಲೀಸರು ದೂರು ದಾಖಲಿಸಿದ್ದಾರೆ.

    MORE
    GALLERIES

  • 29

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ನರೇಶ್ ಸಿಸಿಟಿವಿ ದೃಶ್ಯಾವಳಿಯನ್ನೂ ಪೊಲೀಸರಿಗೆ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಗಚ್ಚಿಬೌಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿಕೋರರು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    MORE
    GALLERIES

  • 39

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ಈ ಹಲ್ಲೆಗೆ ತನ್ನ 3ನೇ ಪತ್ನಿ ರಮ್ಯಾ ರಘುಪತ್ ಕಾರಣ ಎಂದು ನರೇಶ್ ಹೇಳಿಕೊಂಡಿದ್ದಾರೆ. ರಮ್ಯಾ ರಘುಪತಿ ತನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ನರೇಶ್ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಮನೆ ಮೇಲೆ ದಾಳಿ ಕೂಡ ನಡೆದಿದೆ ಎಂದಿದ್ದಾರೆ.

    MORE
    GALLERIES

  • 49

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ಕಳೆದ ಕೆಲ ತಿಂಗಳಿಂದ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಗಿನ ಅಫೇರ್ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ನರೇಶ್ ಮತ್ತು 3ನೇ ಪತ್ನಿ ರಮ್ಯಾ ರಘುಪತಿ ಪರಸ್ಪರ ಆರೋಪ ಮಾಡುತ್ತಿದ್ದು, ನರೇಶ್-ಪವಿತ್ರಾ ಲೋಕೇಶ್ ಸಂಬಂಧ ಭಾರೀ ಸುದ್ದಿಯಾಗಿದೆ.

    MORE
    GALLERIES

  • 59

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ರಮ್ಯಾ ರಘುಪತಿ ಜೊತೆ ನರೇಶ್ ಬಿರುಕು ಬಿಟ್ಟಿದ್ದು, ತನ್ನನ್ನು ದೂರ ಮಾಡಲು ನರೇಶ್ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಮ್ಯಾ ರಘುಪತಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ನರೇಶ್​ಗೆ ವಿಚ್ಛೇದನ ನೀಡುವ ಉದ್ದೇಶ ನನಗಿಲ್ಲ ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 69

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ರಮ್ಯಾ ರಘುಪತಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನರೇಶ್ ಆರೋಪ ಮಾಡಿದ್ದಾರೆ. ನ್ಯಾಯಾಲಯವು ತಕ್ಷಣವೇ ವಿಚ್ಛೇದನ ನೀಡುವಂತೆ ಕೋರಿ ನರೇಶ್ ಮಾಡಿದ್ರು. ಇಬ್ಬರ ವಿಚ್ಛೇದನ ಕೇಸ್ ಕೋರ್ಟ್​ನಲ್ಲಿದೆ.

    MORE
    GALLERIES

  • 79

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ಮತ್ತೊಂದೆಡೆ, ನಟಿ ಪವಿತ್ರಾ ಲೋಕೇಶ್ ಅವರಿಗೆ ಆತ್ಮೀಯರಾಗಿರುವ ನರೇಶ್, ಕಳೆದ ಕೆಲವು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದು, ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ. ನಟ ನರೇಶ್ 4ನೇ ಮದುವೆ ಆಗಲು ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡುತ್ತಿದ್ದಾರೆ.

    MORE
    GALLERIES

  • 89

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ರೂಮ್​ನಲ್ಲಿದ್ದ ವೇಳೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆ ವೇಳೆ ರಮ್ಯಾ ಇಬ್ಬರ ವಿರುದ್ಧವೂ ಪೊಲೀಸ್​ಗೆ ದೂರು ನೀಡಿ ಗಲಾಟೆ ಮಾಡಿದ್ದರು. ಅಂದಿನಿಂದ ನರೇಶ್ ಅವರ 4ನೇ ಮದುವೆ ಸುದ್ದಿ ಚರ್ಚೆಯಲ್ಲಿದೆ

    MORE
    GALLERIES

  • 99

    Actor Naresh: ನರೇಶ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, 3ನೇ ಪತ್ನಿ ವಿರುದ್ಧ ನಟನಿಂದ ದೂರು

    ಈ ವೇಳೆ ನರೇಶ್ ಕೂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮ್ಯಾ ರಘುಪತಿ ತಮ್ಮ ಹಾಗೂ ಪವಿತ್ರಾ ವಿರುದ್ಧ ಕೆಲವು ಯೂಟ್ಯೂಬ್ ಚಾನೆಲ್​ಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಮೂರು ಯೂಟ್ಯೂಬ್ ಚಾನೆಲ್​ಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಎಲ್ಲವನ್ನೂ ತಿಳಿದಂತೆ ಪ್ರಚಾರ ಮಾಡುತ್ತಿವೆ ಎಂದು ದೂರಿದ್ದಾರೆ.

    MORE
    GALLERIES