ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಕೆ.ಎಲ್ ರಾಹುಲ್ ಹಾಗೂ ಅಥಿಯಾಶೆಟ್ಟಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇ-ಟೈಮ್ಸ್ ವರದಿ ಪ್ರಕಾರ ಜನವರಿ 20ರ ಬಳಿಕ ಕೆಎಲ್ ರಾಹುಲ್, ಅಥಿಯಾ ವಿವಾಹ ಅದ್ಧೂರಿಯಾಗಿ ನಡೆಯಲಿದೆಯಂತೆ.
2/ 8
2023 ರಲ್ಲಿ ಸಾಲು ಸಾಲಾಗಿ ಬಾಲಿವುಡ್ ಜೋಡಿಗಳು ವಿವಾಹವಾಗಲಿದ್ದಾರೆ. ಈ ಜೋಡಿಗಳಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕೂಡ ಒಬ್ಬರಾಗಿದ್ದಾರೆ.
3/ 8
ರಾಹುಲ್, ಅಥಿಯಾ ಜೋಡಿಯ ಡೇಟಿಂಗ್, ಮದುವೆ ಬಗ್ಗೆ ನಾನಾ ವದಂತಿಗಳು ಹಬ್ಬಿದ್ದವ. ಈ ಜೋಡಿ ಇದೀಗ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ.
4/ 8
ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ ಮದುವೆ ಅದ್ಧೂರಿಯಾಗಿ ನಡೆಯಲಿದೆ. ನಟಿ ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿಯ ಖಂಡಾಲಾ ಭವ್ಯ ಬಂಗಲೆಯಲ್ಲಿ ನಡೆಯಲಿದೆ .
5/ 8
ಸುನೀಲ್ ಶೆಟ್ಟಿಯ ಭವ್ಯ ಬಂಗಲೆಯಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಡಿಯಾಗಿದ್ದಾರೆ.
6/ 8
ಏಪ್ರಿಲ್ ನಲ್ಲಿ ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗ್ತಿದೆ.
7/ 8
ಸುನೀಲ್ ಶೆಟ್ಟಿ ಅವರ ಮುದ್ದು ಮಗಳು ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಮದುವೆಗೆ ಕೇವಲ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರಿಗಷ್ಟೇ ಆಹ್ವಾನವಿರಲಿದೆ.
8/ 8
ಕೆಎಲ್ ರಾಹುಲ್ ಮತ್ತು ಅಥಿಯಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಆಗಾಗ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಕೆಎಲ್ ರಾಹುಲ್ ಕೂಡ ಕ್ರಿಕೆಟ್ ಆಟಕ್ಕೆ ಕೊಂಚ ಬ್ರೇಕ್ ಕೊಟ್ಟು ರಜೆಯಲ್ಲಿದ್ದು, ಮದುವೆಗೆ ರೆಡಿಯಾಗ್ತಿದ್ದಾರೆ ಎನ್ನಲಾಗ್ತಿದೆ.