Sudha Murthy-Narayana Murthy Biopic: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಸೆಟ್ಟೇರಲಿದೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ಜೀವನಾಧಾರಿತ ಸಿನಿಮಾ ..!
Sudha Murthy-Narayana Murthy Biopic: ಸುಧಾ ಮೂರ್ತಿ ಹಾಗೂ ನಾರಾಣಮೂರ್ತಿ ಅವರ ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ಸೆಟ್ಟೇರಲಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಬಾಲಿವುಡ್ನ ಖ್ಯಾತ ನಿರ್ದೇಶಕಿ. ವಿಶೇಷ ಅಂದರೆ ಈ ಸಿನಿಮಾ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಚಿತ್ರೀಕರಣಗೊಳ್ಳಲಿದೆ. (ಚಿತ್ರಗಳು ಕೃಪೆ: Ashwinyiyertiwari - Instagram)
ಈ ಸಿನಿಮಾವನ್ನು ನಿರ್ದೇಶಕಿ ಅಶ್ವಿನಿ ಐಯ್ಯರ್ ನಿರ್ದೇಶಿಸಲಿದ್ದಾರಂತೆ.
2/ 8
ಹೀಗೆಂದು ಖುದ್ದು ಅಶ್ವಿನಿ ಅಯ್ಯರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸೂಧಾ ಮೂರ್ತಿ ಅವರೊಂದಿಗಿರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪೋಸ್ಟ್ ಮಾಡಿದ್ದಾರೆ.
3/ 8
ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರ ಜೀವನಾಧಾರಿತ ಈ ಸಿನಿಮಾ ಮೂರು ಭಾಷೆಗಳಲ್ಲಿ ಸೆಟ್ಟೇರಲಿದೆ.
4/ 8
ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಈ ಸಿನಿಮಾವನ್ನು ಮಾಡಲಾಗುವುದು ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.
5/ 8
ಈ ಚಿತ್ರಕ್ಕೆ ನಿತೇಶ್ ತಿವಾರಿ, ಪಿಯೂಶ್ ಗುಪ್ತಾ ಹಾಗೂ ಶ್ರೇಯಸ್ ಜೈನ್ ಕತೆ ಬರೆಯಲಿದ್ದಾರಂತೆ, ಈ ಚಿತ್ರದಲ್ಲಿರುವ ತಂಡವೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದೆ.
6/ 8
ಇದರಲ್ಲಿ ಸುಧಾ ಹಾಗೂ ನಾರಾಯಣ ಮೂರ್ತಿ ಅವರ ಜೀವನ ಹಾಗೂ ಅವರ ಜೀವನದಲ್ಲಿ ನಡೆದ ಬಹಳ ಮುಖ್ಯ ಮತ್ತು ಮರೆಯಲಾರದ ಘಟನೆಗಳ ಬಗ್ಗೆಯೂ ವಿಷಯಗಳು ಇರಲಿವೆಯಂತೆ. ಇದರಲ್ಲಿ ರತನ್ ಟಾಟಾ ಅವರ ಉಲ್ಲೇಖ ಬಂದರೂ ಆಶ್ಚರ್ಯ ಪಡಬೇಕಿಲ್ಲ.
7/ 8
ಕಂಗನಾ ಅಭಿನಯದ 'ಪಂಗಾ' ಸಿನಿಮಾವನ್ನೂ ಅಶ್ವಿನಿ ಐಯ್ಯರ್ ಅವರೇ ನಿರ್ದೇಶಿಸಿದ್ದಾರೆ.
8/ 8
ಅಶ್ವಿನಿ ಐಯ್ಯರ್ ಈ ಹಿಂದೆ 'ನೀಲ್ ಬಟೆ ಸನ್ನಾಟ' ಹಾಗೂ 'ಬರೇಲಿ ಕಿ ಬರ್ಫಿ' ಚಿತ್ರಗಳನ್ನು ಅಶ್ವಿನಿ ನಿರ್ದೇಶಿಸಿದ್ದಾರೆ.