ಬಸವನಗುಡಿಯಲ್ಲಿರುವ ದೊಡ್ಡ ಗಣಪತಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಹೊಸ ವರ್ಷಕ್ಕೆ ಅಪ್ಪು ಅಭಿಮಾನಿಗಳು ಮಾಡಿಸಿದ್ದ ಕ್ಯಾಲೆಂಡರ್ ನನ್ನು ಸಹ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಅನೇಕ ಜವಾಬ್ದಾರಿಗಳನ್ನಿ ಅಶ್ವಿನಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. PRK ಪ್ರೊಡೆಕ್ಷನ್ ಜವಾಬ್ದಾರಿ ಹೊತ್ತಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಈಗಾಗಲೇ ಪಿಆರ್ಕೆ ಪ್ರೊಡೆಕ್ಷನ್ ಕೆಲವು ಹಿಟ್ ಮೂವಿಗಳನ್ನು ನೀಡಿದೆ. ಹೊಸ ಪ್ರತಿಭೆಗಳಿಗೆ ಪಿಆರ್ಕೆ ಪ್ರೊಡೆಕ್ಷನ್ ಅವಕಾಶ ಮಾಡಿಕೊಡ್ತಿದೆ. ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ ಸಾಕ್ಷ್ಯ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಯಶಸ್ವಿಯಾಗಿ ತೆರೆ ಮೇಲೆ ತಂದಿದ್ದಾರೆ. ಗಂಧದ ಗುಡಿ ರಿಲೀಸ್ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಹೀಗಾಗಿ ಇಂದು (ಡಿ 23) ಭೇಟಿ ನೀಡಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ ಕ್ಯಾಲೆಂಡರ್ ರಿಲೀಸ್ ಮಾಡಿದ ಅಶ್ವಿನಿ, ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.