NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

ಫ್ಯಾಷನ್​ ಶೋಗಳಲ್ಲಿ ಕ್ಯಾಟ್​ ವಾಕ್​ ಮಾಡುತ್ತಾ... ಸಿನಿಮಾಗಳಲ್ಲಿ ಅಭಿನಯಿಸುತ್ತಾ ಜನಪ್ರಿಯವಾಗಿರುವ ನಟಿ ಆಶಾ ಭಟ್​ ತಮ್ಮ ಕಾಲೇಜು ದಿನಗಳು ಹಾಗೂ ಆಗ ಕಂಡಿದ್ದ ಕನಸಿನ ಬಗ್ಗೆ ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ.ಕಾಲೇಜಿನಲ್ಲಿದ್ದಾಗ ಆಶಾ ಭಟ್​ ಅವರು ಸೇನೆಗೆ ಸೇರುವ ಕನಸು ಕಂಡಿದ್ದರಂತೆ. (ಚಿತ್ರಗಳು ಕೃಪೆ: ಆಶಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published:

  • 17

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಭದ್ರಾವತಿ ಹುಡುಗಿ ಆಶಾ ಭಟ್​ ಮುಂಬೈಗೆ ಹೋಗಿ ಮಾಡೆಲಿಂಗ್​ನಲ್ಲಿ ಹೆಸರು ಮಾಡಿ, ಅಲ್ಲೇ ಬಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮ ಭವಿಷ್ಯ ಕಂಡುಕೊಂಡವರು.

    MORE
    GALLERIES

  • 27

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಆಶಾ ಭಟ್​ ಕನ್ನಡ ರಾಬರ್ಟ್​ ಸಿನಿಮಾದಲ್ಲಿ ದರ್ಶನ್ ಅವರ ಜೊತೆ ನಟಿಸುವ ಮೊದಲು ತುಂಬಾ ಜನರಿಗೆ ಅವರ ಪರಿಚಯವೇ ಇರಲಿಲ್ಲ. ಇಲ್ಲಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಾಗಲೇ ಇವರ ಬಗ್ಗೆ ಸಿನಿಪ್ರಿಯರು ಹುಡುಕಾಟ ನಡೆಸ ತೊಡಗಿದ್ದರು.

    MORE
    GALLERIES

  • 37

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಈ ಕನ್ನಡದ ಹುಡುಗಿ ಆಶಾ ಭಟ್​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಕಾಲೇಜು ದಿನಗಳ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಎನ್​ಸಿಸಿಯಲ್ಲಿ ಕೆಡೆಟ್​ ಆಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 47

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಕಾಲೇಜು ದಿನಗಳಲ್ಲಿ ಎನ್​ಸಿಸಿಯಲ್ಲಿದ್ದಾಗ ಸದಾ ಸೇನೆಗೆ ಸೇರುವ ಕನಸು ಕಾಣುತ್ತಿದ್ದರಂತೆ ಆಶಾ ಭಟ್​. ಆದರೆ ಆಗ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ (NDA – National Defence Academy) ಬರೆಯಲು ಮಹಿಳೆಯರಿಗೂ ಅವಕಾಶ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಆದರೆ ಈಗ ಸುಪ್ರೀಂಕೋರ್ಟ್​ ನೀಡಿರುವ ಆದೇಶದಿಂದಾಗಿ ಎನ್​ಡಿಎಗೆ ಈಗಾಗಲೇ ಮಹಿಳಾ ಅಭ್ಯರ್ಥಿಗಳ ಪ್ರವೇಶಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಅಂದರೆ, ಮೇ 2022ರಲ್ಲಿ ಮಹಿಳೆಯರು ಎನ್​ಡಿಎ ಪರೀಕ್ಷೆಗೆ ಹಾಜರಾಗಬಹುದು. ಈ ಆದೇಶದ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ ಆಶಾ ಭಟ್​.

    MORE
    GALLERIES

  • 67

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಸೇನೆ ಅತ್ಯುನ್ನತ ಪರೀಕ್ಷೆಗಳಲ್ಲಿ ಇದೇ ಮೊದಲ ಬಾರಿ ಮಹಿಳೆಯರು ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದು, ಇದು ನಿಜಕ್ಕೂ ಖುಷಿಯ ವಿಚಾರ ಎಂದಿದ್ದಾರೆ ಆಶಾ ಭಟ್​. ಇದೇ ಖುಷಿಯಲ್ಲಿ ತನ್ನ ಎನ್​ಸಿಸಿ ದಿನಗಳ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 77

    NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

    ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲೂ ಒಂದು ಮನವಿ ಮಾಡಿದ್ದಾರೆ ಈ ನಟಿ. ಹೌದು, ಕಾಲೇಜಿನಲ್ಲಿರುವಾಗಲೇ  ಎನ್​ಸಿಸಿ ಸೇರಿ, ನಿಮ್ಮ ಜೀವನದಲ್ಲಿ ಆಗುವ ಉತ್ತಮ ಬದಲಾವಣೆಗಳನ್ನು ನೋಡಿರಿ ಎಂದಿದ್ದಾರೆ ಆಶಾ ಭಟ್​.

    MORE
    GALLERIES