Aryan Khan: ಪಾಕಿಸ್ತಾನದ ನಟಿ ಜೊತೆ ಪಾರ್ಟಿ ಮಾಡಿದ ಶಾರುಖ್ ಪುತ್ರ ಆರ್ಯನ್ ಖಾನ್; ಫೋಟೋ ವೈರಲ್
ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿ ಹೊರ ಬಂದ ಬಳಿಕ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭಾರೀ ಸುದ್ದಿಯಲ್ಲಿದ್ದಾರೆ. ಬಾಲಿವುಡ್ಗೆ ನಿರ್ದೇಶಕನಾಗಿ ಎಂಟ್ರಿ ಕೊಡಲು ಸಜ್ಜಾಗಿರೋ ಆರ್ಯನ್ ಖಾನ್ ಇದೀಗ ಪಾಕ್ ನಟಿ ಜೊತೆ ಪಾರ್ಟಿ ಮಾಡಿದ್ದಾರೆ.
ಪಾಕಿಸ್ತಾನದ ನಟಿ ಸಾದಿಯಾ ಖಾನ್ ಜೊತೆ ಶಾರುಖ್ ಪುತ್ರ ಆರ್ಯನ್ ಖಾನ್ ಪಾರ್ಟಿ ಮಾಡಿದ್ದು, ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 8
25 ವರ್ಷದ ಆರ್ಯನ್ ಖಾನ್, 30 ವರ್ಷದ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಜತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದರ ನಡುವೆ ಇದೀಗ ಪಾಕ್ ನಟಿ ಜೊತೆಯೂ ಆರ್ಯನ್ ಪಾರ್ಟಿ ಮಾಡಿದ್ದಾರೆ.
3/ 8
ಹೊಸ ವರ್ಷ ಆಚರಣೆಗೆ ಆರ್ಯನ್ ಖಾನ್ ಹಾಗೂ ಸಹೋದರಿ ಸುಹಾನಾ ಖಾನ್ ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಕೂಡ ಭಾಗಿಯಾಗಿದ್ರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
4/ 8
ದುಬೈನಲ್ಲಿ ನಡೆದ ಪಾರ್ಟಿಯಲ್ಲಿ ಪಾಕಿಸ್ತಾನದ ನಟಿ ಸಾದಿಯಾ ಖಾನ್ ಕೂಡ ಭಾಗಿ ಆಗಿದ್ದಾರೆ. ಈ ಪಾಕ್ ನಟಿ ಸಾದಿಯಾ ಖಾನ್ ಜೊತೆಗಿನ ಆರ್ಯನ್ ಖಾನ್ ಫೋಟೋಗಳು ಇದೀಗ ವೈರಲ್ ಆಗಿದೆ.
5/ 8
ನಟಿ ಸಾದಿಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆರ್ಯನ್ ಖಾನ್ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ ನ್ಯೂ ಇಯರ್ ಪಾರ್ಟಿಯಲ್ಲಿ ತೆಗೆದ ಫೋಟೋ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
6/ 8
ಸಾದಿಯಾ ಕಪ್ಪು ಬಣ್ಣದ ಬಟ್ಟೆಯಲ್ಲಿದ್ದಾರೆ. ಆರ್ಯನ್ ಖಾನ್ ಬಿಳಿ ಬಣ್ಣದ ಕೋಟ್ ಧರಿಸಿದ್ದಾರೆ. ಈ ಪಾರ್ಟಿಯಲ್ಲಿ ಬಾಲಿವುಡ್ನ ಹಲವರು ನಟ-ನಟಿಯರು ಸಹ ಭಾಗಿಯಾಗಿದ್ದರು.
7/ 8
ಪಾಕ್ ನಟಿ ಸಾದಿಯಾ ಹಲವು ಟಿವಿ ಶೋಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಸೀರಿಯಲ್ ಗಳಲ್ಲಿ ನಟಿಸಿದ್ದ ನಟಿ ಸಾದಿಯಾ ಟಿವಿ ಶೋ ಮೂಲಕ ಜನಪ್ರಿಯರಾಗಿದ್ದರು.
8/ 8
ಬಾಲಿವುಡ್ ಗೆ ಎಂಟ್ರಿ ಕೊಡಲು ಆರ್ಯನ್ ಖಾನ್ ರೆಡಿಯಾಗಿದ್ದಾರೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ನಿರ್ಮಾಣದಲ್ಲಿ ಆರ್ಯನ್ ಖಾನ್ ನಿರ್ದೇಶಕಕ್ಕೆ ಎಂಟ್ರಿ ಕೊಡ್ತಿದ್ದಾರೆ.