Nora Fatehi-Aryan Khan: ನೋರಾ ಫತೇಹಿ ಜೊತೆ ಶಾರುಖ್ ಮಗನ ಕುಚ್ ಕುಚ್! 30ರ ನಟಿ ಜೊತೆ 25ರ ಆರ್ಯನ್ ಖಾನ್ ಡೇಟಿಂಗ್!?
ಬಾಲಿವುಡ್ ನಲ್ಲಿ ನಟ-ನಟಿಯರ ಡೇಟಿಂಗ್ ಸುದ್ದಿ ಹರಿದಾಡುತ್ತಲೇ ಇರುತ್ತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇರ್ತಾರೆ. ಇದೀಗ ತನಗಿಂತ 5 ವರ್ಷ ದೊಡ್ಡವಳಾದ ನಟಿ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.
ಬಾಲಿವುಡ್ ಅಂಗಳ ಖ್ಯಾತ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ (Nora Fatehi) ಜೊತೆಗೆ ಆರ್ಯನ್ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹಬ್ಬಿದೆ.
2/ 8
ಬಿ-ಟೌನ್ನಲ್ಲಿ ಪ್ರೇಮಕಥೆಗಳಿಗೇನೂ ಕಡಿಮೆ ಇಲ್ಲ, ಶಾರುಕ್ ಮಗನ ಹೊಸ ಪ್ರೇಮ್ ಕಹಾನಿ ಬಗ್ಗೆ ಬಾಲಿವುಡ್ ನಲ್ಲಿ ಗುಸುಗುಸು ಶುರುವಾಗಿದೆ.
3/ 8
ನೋರಾ ಫತೇಹಿ ಮತ್ತು ಆರ್ಯನ್ ಖಾನ್ ನಡುವೆ ವಯಸ್ಸಿನ ಅಂತರ ಇದೆ. ಹಾಗಿದ್ದರೂ ಕೂಡ ಇಬ್ಬರ ನಡುವೆ ಡೇಟಿಂಗ್ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
4/ 8
ದುಬೈನಲ್ಲಿ ಅದ್ಧೂರಿಯಾಗಿ ಹೊಸ ವರ್ಷ ಆರಂಭಿಸಿದ ಆರ್ಯನ್ ಖಾನ್, ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ರು ಈ ಫೋಟೋಗಳು ಇದೀಗ ವೈರಲ್ ಆಗಿದೆ.
5/ 8
ನಟಿ ನೋರಾ ಫತೇಹಿ ಕೂಡ ಹೊಸ ವರ್ಷದ ಸಂದರ್ಭದಲ್ಲಿ ದುಬೈನಲ್ಲಿ ಇದ್ದರು. ಅವರು ಹಂಚಿಕೊಂಡ ಫೋಟೋದ ಬ್ಯಾಗ್ರೌಂಡ್ ಕೂಡ ಆರ್ಯನ್ ಖಾನ್ ಶೇರ್ ಮಾಡಿದ ಫೋಟೋದ ರೀತಿಯೇ ಇದೆ.
6/ 8
ಇಬ್ಬರು ದುಬೈಗೆ ಹೋಗಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದು, ಆ ಕಾರಣದಿಂದ ಇಬ್ಬರ ಡೇಟಿಂಗ್ ಬಗ್ಗೆ ಅನುಮಾನ ಶುರುವಾಗಿದೆ.
7/ 8
ನೋರಾ ಫತೇಹಿ ಅವರಿಗೆ ಈಗ 30 ವರ್ಷ ವಯಸ್ಸು. ಆರ್ಯನ್ ಖಾನ್ಗೆ 25 ವರ್ಷ, ನೋರಾ ಫತೇಹಿಗಿಂತ ಆರ್ಯನ್ ಖಾನ್ 5 ವರ್ಷ ಚಿಕ್ಕವನಿದ್ದಾನೆ.
8/ 8
ಆರ್ಯನ್ ಖಾನ್ ಕೂಡ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಇತ್ತೀಚಿಗೆ ಪ್ರೀ-ಪ್ರೊಡಕ್ಷನ್ ಕೆಲಸದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿಲ್ಲ. ಬದಲಿಗೆ, ನಿರ್ದೇಶಕನಾಗಿ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ.