ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಆದಿಪುರುಷ ಗ್ರ್ಯಾಂಡ್ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಚಿತ್ರದ ಪ್ರಚಾರದತ್ತ ಗಮನ ಹರಿಸಿರುವ ನಿರ್ಮಾಪಕರು ಕಾಲಕಾಲಕ್ಕೆ ಸಿನಿಮಾ ಬಗ್ಗೆ ರೋಚಕ ಅಪ್ಡೇಟ್ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಇದರಿಂದ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹಲವು ವಿವಾದಗಳು ಆದಿಪುರುಷನನ್ನು ಸುತ್ತಿಕೊಂಡಿದೆ.
ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದಲ್ಲಿ ಈ ಅದ್ಧೂರಿ ಸಿನಿಮಾ ತಯಾರಾಗುತ್ತಿದೆ. 400 ಕೋಟಿ ರೂ. ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿವೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್, ದೇವದತ್ತ ನಾಗೆ, ಸನ್ನಿ ಸಿಂಗ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.