Arjun Janya: ಹೊಸ ಪ್ರಾಜೆಕ್ಟ್ ಜೊತೆಗೆ ನ್ಯೂ ಲುಕ್ನಲ್ಲಿ ಎಂಟ್ರಿ ಕೊಟ್ಟ ಅರ್ಜುನ್ ಜನ್ಯ..!
ಅರ್ಜುನ್ ಜನ್ಯ ಸದ್ಯ ಕೈ ತುಂಬ ಇರುವ ಕೆಲಸಗಳಿಂದಾಗಿ ಸಖತ್ ಬ್ಯುಸಿಯಾಗಿದ್ದಾರೆ. ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಹೊಸ ಲುಕ್ ಹಾಗೂ ಹೊಸ ಪ್ರಾಜೆಕ್ಟ್ ಜೊತೆ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅರ್ಜುನ್ ಜನ್ಯ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರಿಯಾಲಿಟಿ ಮ್ಯೂಸಿಕ್ ಕಾರ್ಯಕ್ರಮ ಹಾಗೂ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
2/ 10
ಲಾಕ್ಡೌನ್ನಲ್ಲಿ ಮನೆಯಲ್ಲಿ ಕುಟುಂಬದೊಂದಿಗೆ ಆರಾಮಾಗಿದ್ದ ಅರ್ಜುನ್ ಅವರ ಲುಕ್ ಹೀಗಿತ್ತು.
3/ 10
ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಸಂಪೂರ್ಣವಾಗಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಪ್ರಶಾಂತ್ ಅವರು ಅರ್ಜುನ್ ಜನ್ಯ ಅವರಿಗೆ ಈ ಲುಕ್ ಕೊಟ್ಟಿದ್ದು, ಅಭಿಮಾನಿಗಳಿಗೆ ಇದು ತುಂಬಾ ಇಷ್ಟವಾಗುತ್ತಿದೆ.
4/ 10
Krishna@gmail.com ಸಿನಿಮಾಗಾಗಿ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಆರಂಭಿಸಿದ್ದಾರೆ. ನಾಗಶೇಖರ್ ನಿರ್ದೇಶನದ ಈಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
5/ 10
ಅಪ್ಪನೊಂದಿಗೆ ಅರ್ಜುನ್ ಜನ್ಯ
6/ 10
ಅರ್ಜುನ್ ಜನ್ಯ ಲಾಕ್ಡೌನ್ಗೂ ಮೊದಲು ಲಘು ಹೃದಾಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
7/ 10
ಚಿಕಿತ್ಸೆ ಪಡೆದು ಹಿಂತಿರುಗಿದ ನಂತರ ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ಮರಳಿದ್ದಾರೆ.
8/ 10
ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ಮರಳಿದಾಗ ನಿರ್ದೇಶಕ ಜೋಗಿ ಪ್ರೇಮ್ ಈ ಚಿತ್ರವನ್ನು ಹಂಚಿಕೊಂಡಿದ್ದರು.