Divya Uruduga-Aravind KP: ದಿವ್ಯಾ ಉರುಡುಗಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಕೆಪಿ ಅರವಿಂದ್! ಮದುವೆ ಬಗ್ಗೆ ಬಿಗ್ ಬಾಸ್ ಜೋಡಿ ಹೇಳಿದ್ದೇನು?
ಬಿಗ್ ಬಾಸ್ ಸೀಸನ್ 8 ಹಾಗೂ 9ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ನಿನ್ನೆ (ಜನವರಿ 16) ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಿವ್ಯಾ ಬರ್ತಡೇ ಅರವಿಂದ್ ಕೆಪಿ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಪ್ರೇಮಿಗಳಾಗಿ ಹೊರಗಿ ಬಂದಿದ್ರು.
2/ 8
ಸೀಸನ್ 8ರಲ್ಲಿ ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಎಲ್ಲರ ಗಮನ ಸೆಳೆದಿದ್ದ ಈ ಜೋಡಿ ಹೊರಗೆ ಬಂದ ಬಳಿಕ ಮತ್ತಷ್ಟು ಕ್ಲೋಸ್ ಆಗಿದ್ದಾರೆ. ಈ ಜೋಡಿ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
3/ 8
ದಿವ್ಯಾ ಉರುಡುಗ ಹುಟ್ಟುಹಬ್ಬಕ್ಕೆ (Birthday) ಕೆಪಿ ಅರವಿಂದ್ ಗ್ರ್ಯಾಂಡ್ ಪಾರ್ಟಿ ಅರೆಂಜ್ ಮಾಡಿದ್ದಾರೆ.
4/ 8
ಬರ್ತಡೇ ಪಾರ್ಟಿಗೆ ದಿವ್ಯಾ ಉರುಡುಗ ಸ್ನೇಹಿತರನ್ನು ಸಹ ಕರೆದು ದಿವ್ಯಾಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
5/ 8
ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಅರವಿಂದ್ ಸಿಹಿಸುದ್ದಿ ಕೊಟ್ಟಿದ್ದರು. ಇದೀಗ ಪಾರ್ಟಿ ಮೂಲಕ ಭಾವಿ ಪತ್ನಿಯನ್ನು ಖುಷಿಪಡಿಸಿದ್ದಾರೆ.
6/ 8
ಗ್ರ್ಯಾಂಡ್ ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಮಿಂಚಿದ್ದಾರೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಕಪ್ಪು ಬಣ್ಣದ ಉಡುಗೆಯ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.
7/ 8
ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಅವರು ಇಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ಸುಂದರಿಗೆ ಶುಭಾಶಯಗಳ ಸುರಿಮಳೆಯಾಗಿದೆ.
8/ 8
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಈ ಜೋಡಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದು, ನಿಮ್ಮಿಬ್ಬರ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.