ಮ್ಯೂಸಿಕ್ ಕಂಪೋಸರ್ ಎ.ಆರ್. ರೆಹಮಾನ್ ಅವರು ತಮ್ಮ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದಲೇ ಬೆಳೆದುಬಂದ ಸೆಲೆಬ್ರಿಟಿ. ದಕ್ಷಿಣ ಚಿತ್ರರಂಗದ ಹೊರತಾಗಿ, ಅವರು ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ತಮ್ಮ ಸಂಗೀತದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ.
2/ 12
ಸೂಪರ್ಹಿಟ್ ಮ್ಯೂಸಿಕ್ ಕಂಪೋಸ್ ಮಾಡುವುದರ ಜೊತೆಗೆ, ಅವರು ಅಷ್ಟೇ ಸೊಗಸಾಗಿ ಹಾಡಬಲ್ಲರು. ಇದಕ್ಕೆ ಸಾಕ್ಷಿಗಳು 'ವಂದೇ ಮಾತರಂ', 'ಖ್ವಾಜಾ ಮೇರೆ ಖ್ವಾಜಾ' (ಜೋಧಾ ಅಕ್ಬರ್) ನಂತಹ ಹಿಟ್ ಟ್ರ್ಯಾಕ್ಗಳು.
3/ 12
ಎಆರ್ ರೆಹಮಾನ್ ಅವರ ಮೂಲ ಹೆಸರಲ್ಲ ಅನ್ನೋದು ನಿಮಗೆ ಗೊತ್ತೇ? ಇವರ ಮೂಲ ಹೆಸರು ದಿಲೀಪ್ ಕುಮಾರ್.
4/ 12
ದೂರದರ್ಶನದ 'ವಂಡರ್ ಬಲೂನ್' ಧಾರಾವಾಹಿಯಲ್ಲಿ ಇವರು ಒಮ್ಮೆ ಒಂದು ಸಣ್ಣ ಪಾತ್ರವನ್ನು ಮಾಡಿದ್ದರು ಎನ್ನುವುದು ಹಲವರಿಗೆ ಗೊತ್ತಿಲ್ಲ.
5/ 12
ಎಆರ್ ರೆಹಮಾನ್ ಒಂದೇ ಬಾರಿಗೆ 4 ಕೀಬೋರ್ಡ್ ನುಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇವರು ನಿಜಕ್ಕೂ ಸಂಗೀತ ಮಾಂತ್ರಿಕ.
6/ 12
ಮಾರ್ಕ್ಹ್ಯಾಮ್ನಲ್ಲಿ (ಒಂಟಾರಿಯೊ, ಕೆನಡಾ) ಅವರ ಗೌರವಾರ್ಥವಾಗಿ ಹೆಸರಿಸಲಾದ ರಸ್ತೆ ಇದೆ. ಆ ಬೀದಿಯನ್ನು 'ಅಲ್ಲಾ ರಖಾ ರೆಹಮಾನ್ ಸ್ಟ್ರೀಟ್' ಎಂದು ಕರೆಯಲಾಗುತ್ತದೆ. ಇದನ್ನು 2013 ರಲ್ಲಿ ಉದ್ಘಾಟಿಸಲಾಯಿತು.
7/ 12
ಜನರು ಇಂದು ಅತಿಯಾಗಿ ಮೆಚ್ಚುವಂತಹ ಏರ್ಟೆಲ್ನ ಸಿಗ್ನೇಚರ್ ಟ್ಯೂನ್ ಎಆರ್ ರೆಹಮಾನ್ ಕಂಪೋಸ್ ಮಾಡಿದ್ದಾರೆ.
8/ 12
ಎಆರ್ ರೆಹಮಾನ್ ಅವರ ಸಂಗೀತ ಪ್ರತಿಭೆಯನ್ನು ಮೊದಲು ಕಂಡವರು ನಿರ್ದೇಶಕ ಮಣಿರತ್ನಂ.‘ರೋಜಾ’ ಚಿತ್ರದ ಮೂಲಕ ಸಂಗೀತ ಪ್ರತಿಭೆಗೆ ಬ್ರೇಕ್ ನೀಡಿದ್ದ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಇದರಲ್ಲಿ ರೆಹಮಾನ್ ಪಡೆದ ಸಂಭಾವನೆ 25,000 ರೂಪಾಯಿ.
9/ 12
ಎಆರ್ ರೆಹಮಾನ್ ಮತ್ತು ಅವರ ಮಗ ಅಮೀನ್ ಬರ್ತ್ಡೇ ಒಂದೇ ದಿನ. ತಂದೆ ಹುಟ್ಟಿದ ಅದೇ ಡೇಟ್ನಲ್ಲಿ ಮಗ ಹುಟ್ಟಿದ್ದು.
10/ 12
ಅವೆಂಜರ್ಸ್: ಎಂಡ್ಗೇಮ್ ಬಗ್ಗೆ ಕೇಳದವರಿಲ್ಲ. ಈ ಸಿನಿಮಾದ ಇಂಡಿಯನ್ ರಿಲೀಸ್ಗಾಗಿ ಎಆರ್ ರೆಹಮಾನ್ ವಿಶೇಷ ಹಾಡನ್ನು ರಚಿಸಿದ್ದರು.
11/ 12
ಎಆರ್ ರೆಹಮಾನ್ ಹೆಸರಿನಲ್ಲಿ ‘ಎಆರ್’ ಎಂಬ ಮೊದಲಕ್ಷರಗಳ ಫುಲ್ಫಾರ್ಮ್ ಏನು ಗೊತ್ತಾ? ಅದು ‘ಅಲ್ಲಾ ರಖಾ ರೆಹಮಾನ್’ ಎಂದಾಗಿದೆ.
12/ 12
ಎಆರ್ ರೆಹಮಾನ್ ಒಂದು ಕಾಲದಲ್ಲಿ ಬಾಲ್ಯದ ಗೆಳೆಯರೊಂದಿಗೆ ರೂಪಿಸಿದ ಬ್ಯಾಂಡ್ನಲ್ಲಿ ಕೀಬೋರ್ಡ್ ವಾದಕರಾಗಿದ್ದರು. ಅವರು ತಮ್ಮ ಗುಂಪಿಗೆ ‘ನೆಮೆಸಿಸ್ ಅವೆನ್ಯೂ’ ಎಂದು ಹೆಸರಿಟ್ಟಿದ್ದರು.