ಅನುಶ್ರೀಯವರು ಇತ್ತೀಚೆಗೆ ಟಿವಿ ಚಾನೆಲ್ಗಳಲ್ಲಿ ಮಾತ್ರವಲ್ಲದೇ, ಯೂಟ್ಯೂಬ್ನಲ್ಲಿ ತನ್ನದೇ ಆದ ಚಾನೆಲ್ ಅನ್ನು ರಚಿಸಿಕೊಂಡು ಬಹಳಷ್ಟು ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದಾರೆ. ಇತ್ತೀಚೆಗೆ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಶುಭ ಪೂಂಜ ಮತ್ತು ಅವರ ಪತಿ ಸುಮಂತ್ ಅನುಶ್ರೀ ಅವರ ಸಂದರ್ಶನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನುಶ್ರೀಯವರು ಅವರ ಜೀವನದ ಕೆಲವು ತಮಾಷೆಯ ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಅನುಶ್ರೀ ಹಾಗೂ ಶುಭಾ ಪೂಂಜಾ ಬಹುಕಾಲದ ಗೆಳೆಯರು. ಇಬ್ಬರೂ ಸಹ ಮೂಲತಃ ಮಂಗಳೂರಿನವರಾಗಿದ್ದರಿಂದ ಮೊದಲಿನಿಂದಲೇ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುತ್ತಿದ್ದರು. ಅದೇ ರೀತಿ ಒಂದು ದಿನ ಶುಭಾ ಮನೆಗೆ ಅನುಶ್ರೀ ಹೋಗಿದ್ದಾಗ, ಬಹಳಷ್ಟು ಹಸಿದಿದ್ದ ಅನುಶ್ರೀ ತಿನ್ನಲು ಏನಿದೆ ಎಂದು ಶುಭಾ ಬಳಿ ಕೇಳಿದ್ದಾರೆ. ಅಷ್ಟರಲ್ಲಿ ಶುಭಾ ಅವರು ಏನೋ ತುರ್ತು ಕೆಲಸದಲ್ಲಿದ್ದರಿಂದ ಚಿಕನ್ ಮಾಡಿದ್ದೇನೆ, ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಅವರ ಕೆಲಸಕ್ಕೆ ತೆರಳಿದ್ದರು.