ಬಾಹುಬಲಿ ಬ್ಯೂಟಿ, ಅಭಿಮಾನಿಗಳ ಸ್ವೀಟಿ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಗುಡ್ಬೈ ಹೇಳಲಿದ್ದಾರಾ? ಇಂತಹದೊಂದು ಪ್ರಶ್ನೆ ಇದೀಗ ಟಾಲಿವುಡ್ ಅಂಗಳದಲ್ಲಿದೆ.
2/ 15
ಟಾಲಿವುಡ್ನ ಟಾಪ್ ನಟಿಯರ ನಡುವೆ ಭರ್ಜರಿ ಪೈಪೋಟಿಯನ್ನೇ ನಡೆಸುತ್ತಿರುವ 38ರ ಅನುಷ್ಕಾ, ಈಗಲೂ ಬಹುಬೇಡಿಕೆಯ ನಟಿ ಎಂಬುದರಲ್ಲಿ ನೋ ಡೌಟ್. ಅದರಲ್ಲೂ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಕಮಾಲ್ ಮಾಡುವ ಕರಾವಳಿ ಚೆಲುವೆಗೂ ಸರಿಸಾಟಿಯಾಗಿ ಸದ್ಯಕ್ಕಂತು ತೆಲುಗು ಚಿತ್ರರಂಗದಲ್ಲಿ ಮತ್ತೊಬ್ಬರಿಲ್ಲ.
3/ 15
ಇನ್ನು ಗ್ಲಾಮರಸ್ ಪಾತ್ರಕ್ಕೂ ಸೈ, ಐತಿಹಾಸಿಕ ಚಿತ್ರಗಳಿಗೂ ಜೈ ಎಂದು ಅನುಷ್ಕಾ ಶೆಟ್ಟಿ ಈಗಾಗಲೇ ನಿರೂಪಿಸಿದ್ದಾರೆ. ಬಾಹುಬಲಿ ಸರಣಿಯಲ್ಲಿ ಮನೋಜ್ಞ ಅಭಿನಯ ನೀಡಿದ್ದ ನಟಿ ಆ ಬಳಿಕ ಕಾಣಿಸಿಕೊಂಡಿದ್ದು ಬೆರಳಣಿಕೆ ಚಿತ್ರಗಳಲ್ಲಿ ಮಾತ್ರ ಎಂಬುದೇ ಅಚ್ಚರಿ.
4/ 15
ಬಾಹುಬಲಿ-2 ಬಳಿಕ ಭಾಗಮತಿ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದರು. ಇದರ ಬೆನ್ನಲ್ಲೇ ಬಹು ಬಜೆಟ್ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ವಿಶೇಷ ಪಾತ್ರದಲ್ಲಿ ಕತ್ತಿ ಝಳಪಳಿಸಿದ್ದರು.
5/ 15
ಇನ್ನು ದ್ವಿಭಾಷಾ ಚಿತ್ರ ನಿಶ್ಶಬ್ದಂ ನಲ್ಲಿ ಅನುಷ್ಕಾ ಮೂಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಕೊರೋನಾ ಕಾರಣದಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
6/ 15
ಇದರ ಹೊರತಾಗಿ ಅನುಷ್ಕಾ ಮತ್ಯಾವ ಸಿನಿಮಾಗೂ ಓಕೆ ಅಂದಿಲ್ವಂತೆ. ಅಂದರೆ ಬಾಹುಬಲಿ ಬ್ಯೂಟಿಗೆ ಅವಕಾಶಗಳು ಸಿಗುತ್ತಿಲ್ಲವೇ ಎಂಬ ಪ್ರಶ್ನೆಗೆ ಕೇಳಿ ಬರುತ್ತಿರುವ ಉತ್ತರ ಹಾಗೇನು ಇಲ್ಲ. ಏಕೆಂದರೆ ಸಕಲ ಕಲಾವಲ್ಲಭ ಕಮಲ್ ಹಾಸನ್ ಚಿತ್ರಕ್ಕೂ ಅನುಷ್ಕಾ ಶರ್ಮಾ ಬುಕ್ ಆಗಿದ್ದಾರೆ.
7/ 15
ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ ವೇಟೆಯಾಡು ವೆಳೆಯಾಡು ಚಿತ್ರದ ಎರಡನೇ ಭಾಗಕ್ಕೆ ಕಮಲ್ಹಾಸನ್ ನಾಯಕಿಯಾಗಿ ಅನುಷ್ಕಾ ಅವರಿಗೆ ಆಫರ್ ನೀಡಲಾಗಿದೆ. ಆದರೆ ಈ ಸಿನಿಮಾ ಲಾಕ್ಡೌನ್ ಕಾರಣದಿಂದ ಸೆಟ್ಟೇರಿಲ್ಲ.
8/ 15
ಇದರ ಹೊರತಾಗಿ ಅನುಷ್ಕಾ ಯಾವ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕಂತು ಉತ್ತರವಿಲ್ಲ. ಆದರೆ ಅವರ ಆಪ್ತಮೂಲಗಳ ಪ್ರಕಾರ ಕರಾವಳಿ ಚೆಲುವೆ ತಮ್ಮ ಆಪ್ತ ನಿರ್ದೇಶಕರು ಮತ್ತು ನಿರ್ಮಾಪಕರ ಚಿತ್ರಗಳಿಗೆ ಮಾತ್ರ ಡೇಟ್ಸ್ ನೀಡುತ್ತಿದ್ದಾರಂತೆ.
9/ 15
ಒಂದೆಡೆ ಸೈಲೆನ್ಸ್ (ನಿಶ್ಶಬ್ದಂ) ಚಿತ್ರದ ಬಳಿಕ ಹೊಸ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಅನುಷ್ಕಾ ಶೆಟ್ಟಿ ಸೈಲೆಂಟಾಗಿದ್ದಾರೆ. ಇದರೊಂದಿಗೆ ನಟಿ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರಾ? ವಿವಾಹಕ್ಕೆ ಸಜ್ಜಾದ್ರಾ ಎಂಬ ಪ್ರಶ್ನೆಗಳೂ ಕೂಡ ಹುಟ್ಟಿಕೊಂಡಿದೆ.