ಕನ್ನಡತಿ ಅನುಷ್ಕಾ ಶೆಟ್ಟಿ ಸಂಭಾವನೆ ಇಷ್ಟೊಂದ!; ಬಾಹುಬಲಿ ಬೆಡಗಿ ‘ನಿಶ್ಯಬ್ದಂ‘ ಚಿತ್ರಕ್ಕೆ ಪಡೆದುಕೊಂಡ ಹಣವೆಷ್ಟು ಗೊತ್ತಾ?
Anushka Shetty: ‘ನಿಶ್ಯಬ್ದಂ‘ ಸಿನಿಮಾ ಏಪ್ರಿಲ್ 2ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಮೂಗಿಯ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಧವನ್, ಮೈಕೆಲ್ ಮ್ಯಾಡ್ಸೆನ್, ಅಂಜಲಿ, ಸುಬ್ಬರಾಜು, ಶಾಲಿನಿ ಪಾಂಡೆ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಕನ್ನಡತಿ ಅನುಷ್ಕಾ ಶೆಟ್ಟಿ ಅವರ ಸಂಭಾವನೆ ಕುರಿತಂತೆ ಟಾಲಿವುಡ್ನಲ್ಲಿ ಟಾಕ್ ಶುರುವಾಗಿದೆ . ಬಾಹುಬಲಿ ಸಿನಿಮಾದ ನಂತರ ಬ್ರೇಕ್ ಪಡೆದುಕೊಂಡಿದ್ದ ಅನುಷ್ಕಾ ಶೆಟ್ಟಿ ಕೊಂಚ ಬಿಡುವು ಪಡೆದುಕೊಂಡರು. ಆನಂತರ ತೂಕ ಇಳಿಕೆ ಮಾಡಲು ವಿದೇಶ ತೆರಳಿದರು.
2/ 17
ಚಿಕಿತ್ಸೆ ಪಡೆದುಕೊಂಡು ತೂಕ ಇಳಿಕೆ ಮಾಡಿಕೊಂಡು ಭಾರತಕ್ಕೆ ವಾಪಾಸ್ಸಾದ ಅನುಷ್ಕಾ ಆನಂತರ ‘ನಿಶ್ಯಬ್ದಂ‘ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ಸಿನಿಮಾದಲ್ಲಿ ಮೂಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.
3/ 17
ಆಚ್ಚರಿ ಎಂದರೆ ಈ ಸಿನಿಮಾಗಾಗಿ ನಟಿ ಅನುಷ್ಕಾ ಪಡೆದ ಸಂಭಾವನೆ ಅಚ್ಚರಿಗೆ ಕಾರಣವಾಗಿದೆ. ಹಾಗಿದ್ದರೆ ಅನುಷ್ಕಾ ‘ನಿಶ್ಯಬ್ದಂ‘ ಸಿನಿಮಾಗೆ ಪಡೆದ ಹಣವೆಷ್ಟು?.
4/ 17
ಇತ್ತೀಚೆಗೆ ಕೆ.ಜಿ.ಎಫ್ ಚಿತ್ರದಲ್ಲಿನ ಪಾತ್ರವೊಂದಕ್ಕೆ ನಟಿ ಅನುಷ್ಕಾ ಅವರನ್ನು ಕೇಳಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಸಂಭಾವನೆ ವಿಚಾರವಾಗಿ ಅನುಷ್ಕಾ ಅವರನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.
5/ 17
ಬಾಹುಬಲಿ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ‘ನಿಶ್ಯಬ್ದಂ‘ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗಿ ತೆರೆ ಕಾಣಲು ಸಜ್ಜಾಗಿದೆ. ಬಹಳ ಸಮಯದ ನಂತರ ಅಭಿಮಾನಿಗಳು ಕೂಡ ಅನುಷ್ಕಾ ಅವರನ್ನು ತೆರೆ ಮೇಲೆ ಕಾಣಲು ಕುತೂಹಲದಲ್ಲಿ ಕುಳಿತಿದ್ದಾರೆ.
6/ 17
ಮಾಹಿತಿಗಳ ಪ್ರಕಾರ ಕನ್ನಡತಿ ಅನುಷ್ಕಾ ಅವರ ಸಂಭಾವನೆ ಪಟ್ಟಿ ದೊಡ್ಡದಾಗಿದೆ. ‘ನಿಶ್ಯಬ್ದಂ‘ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ಬರೋಬ್ಬರು 2.5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ತೆಲುಗಿನ ಯಾವ ನಟಿಯರು ಕೂಡ ಇಷ್ಟು ದೊಡ್ಡ ಸಂಭಾವನೆ ಪಡೆದುಕೊಂಡಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ.
7/ 17
‘ನಿಶ್ಯಬ್ದಂ‘ ಸಿನಿಮಾ ಸಂಫೂರ್ಣ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
8/ 17
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ತೆಲುಗು ಸಿನಿಮಾಗೆ 1.5 ಕೋಟಿ ರೂಪಾಯಿ ಪಡೆಯುತ್ತಾಋಂತೆ. ಅಂತೆಯೇ, ನಟಿ ಕಾಜಲ್ ಅಗರ್ವಾಲ್ ಕೂಡ 1.5 ಕೋಟಿ ರೂಪಾಯಿ ಸಂಭಾವಣೆ ತೆಗೆದುಕೊಳ್ಳುತ್ತಾರೆ. ಆದರೆ ಇವರೆಲ್ಲರಿಗಿಂತ ನಟಿ ಅನುಷ್ಕಾ ಶೆಟ್ಟಿ 1 ಕೋಟಿ ರೂಪಾಯಿ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.
9/ 17
ಈಗಾಗಲೇ ಕುತೂಹಲ ಕೆರಳಿಸಿರುವ ‘ನಿಶ್ಯಬ್ದಂ‘ ಸಿನಿಮಾ ಏಪ್ರಿಲ್ 2ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಮೂಗಿಯ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಧವನ್, ಮೈಕೆಲ್ ಮ್ಯಾಡ್ಸೆನ್, ಅಂಜಲಿ, ಸುಬ್ಬರಾಜು, ಶಾಲಿನಿ ಪಾಂಡೆ ಮುಂತಾದವರು ಕಾಣಿಸಿಕೊಂಡಿದ್ದಾರೆ.
10/ 17
‘ನಿಶ್ಯಬ್ದಂ‘ ಸಿನಿಮಾಗೆ ಹೇಮಂತ್ ಮಧುಕರ್ ನಿರ್ದೇಶನ ಮಾಡಿದ್ದು, ಕೊಣ ವೆಂಕಟ್ ಮತ್ತು ಟಿ.ಜಿ. ವಿಶ್ವಪ್ರಸಾದ್ ಬಂಡವಾಳ ಹೂಡಿದ್ದಾರೆ.