ಕೆಲ ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಮಗಳೊಂದಿಗೆ ನೇರವಾಗಿ ವೃಂದಾವನಕ್ಕೆ ಆಗಮಿಸಿದ್ದರು. ಇಲ್ಲಿ ಬಾಬಾ ನೀಮ್ ಕರೌಲಿಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದು ಗಂಟೆ ಧ್ಯಾನವನ್ನೂ ಮಾಡಿದ್ದರು. ಈ ದಂಪತಿ ಬಾಬಾ ನೀಮ್ ಕರೌಲಿಯ ಅನುಯಾಯಿಗಳು. ಈ ಹಿಂದೆ ವಿರಾಟ್-ಅನುಷ್ಕಾ ಕೂಡ ನೈನಿತಾಲ್‌ನಲ್ಲಿರುವ ಬಾಬಾ ನೀಮ್ ಕರೌಲಿಯ ಕೈಂಚಿ ಧಾಮಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು.