Anushka Sharma ಸೀರೆ ಬಾಡಿಗೆ ಪಡೆದಿದ್ದ ಡು ಪ್ಲೆಸಿಸ್ ಪತ್ನಿ ಇಮಾರಿ! ನೋಡೋಕೆ ಕ್ಯೂಟ್ ಕಾಣ್ತೀರಾ ಎಂದ ನೆಟ್ಟಿಗರು
ಇಮಾರಿ ಅವರ ಪೋಸ್ಟ್ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಇದು ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇಮಾರಾ, ಅನುಷ್ಕಾ ಅವರ ಬಳಿ, ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ
ಇತ್ತೀಚೆಗಷ್ಟೇ ಆರ್ಸಿಬಿ ಟೀಂ ಆಟಗಾರ ಮ್ಯಾಕ್ಸ್ವೆಲ್ ಭಾರತದ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಇದಕ್ಕಾಗಿ ಆರ್ಸಿಬಿ ತಂಡ ಇವರಿಗಾಗಿ ವಿಶೇಷ ಪಾರ್ಟಿಯೊಂದು ಆಯೋಜಿಸಲಾಗಿತ್ತು.ಬಯೋ ಬಬಲ್ನಲ್ಲೇ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ವಿದೇಶಿ ಆಟಗಾರರ ಹೆಂಡತಿಯರು ಭಾಗಿಯಾಗಿದ್ದರು.
2/ 7
ಆರ್ಸಿಬಿ ತಂಡದ ಗ್ಲೆನ್ ಮ್ಯಾಕ್ಸ್ವೆಲ್ ಅವರ ಮದುವೆ ಬಳಿಕ ಆರ್ಸಿಬಿ ತಂಡ ಪಾರ್ಟಿಯಲ್ಲಿ ಇಮಾರಿ, ಅನುಷ್ಕಾ ಶರ್ಮಾ ಅವರಿಂದ ಎರವಲು ಪಡೆದಿದ್ದ ಸೀರೆಯನ್ನು ಉಟ್ಟಿದ್ದರು
3/ 7
ಹೌದು, ಈ ಪಾರ್ಟಿಯ ವಿಶೇಷ ಎಂದರೇ ಎಲ್ಲರೂ ಭಾರತೀಯ ಸಂಪ್ರದಾಯ ಉಡುಗೆ ತೊಟ್ಟದ್ದರು. ಹುಡುಗರು ಜುಬ್ಬಾ ಪೈಜಾಮದಲ್ಲಿ ಮಿಂಚಿದರೆ, ಅವರ ಪತ್ನಿಯಂದಿರು ಸೀರೆ ತೊಟ್ಟು ಬಂದಿದ್ದರು. ಆರ್ಸಿಬಿ ತಂಡ ನಾಯಕ ಡು ಪ್ಲೆಸಿಸ್ ಪತ್ನಿ ಇಮಾರಿ ತೊಟ್ಟಿದ್ದ ಹಸಿರು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿತ್ತು,
4/ 7
ಇಮಾರಿ ಸೀರೆಯ ಕುರಿತು ಅಭಿಮಾನಿಗಳು ಗಮನಿಸಿದ ಅಂಶವೇನೆಂದರೆ, ಅದೇ ಸೀರೆಯನ್ನು ಅನುಷ್ಕಾ ಶರ್ಮಾ ಕೂಡ 2018ರಲ್ಲಿ ಉಟ್ಟಿದ್ದರು. ಅದೇ ಸೀರೆಯನ್ನೇ ಇಮಾರಿ ಉಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
5/ 7
ಇಮಾರಿ ಅವರ ಪೋಸ್ಟ್ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಇದು ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇಮಾರಾ, ಅನುಷ್ಕಾ ಅವರ ಬಳಿ, ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ
6/ 7
ಇನ್ನೂ ಕೆಲವರು ಇಮಾರಿ ಅವರ ದೇಸಿ ಲುಕ್ಗೆ ಫಿದಾ ಆಗಿದ್ದಾರೆ. ಅನುಷ್ಕಾ ಶರ್ಮಾರಂತೆ ಈ ಸೀರೆಯಲ್ಲಿ ನೀವು ಮುದ್ದಾಗಿ ಕಾಣುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.
7/ 7
ಇನ್ನೂ ಇದೇ ಪಾರ್ಟಿಯಲ್ಲಿ ಆರ್ಸಿಬಿ ಆಟಗಾರರು ಸಖತ್ ಸ್ಟೆಪ್ ಹಾಕಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಊ ಅಂಟಾವಾ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.