ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹಳದಿ ಬಣ್ಣದ ಸುಂದರವಾದ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಹೊಸ ಟಾಪ್ ಧರಿಸಿ ಹಲವಾರು ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸ್ಟೈಲಿಷ್ ಫೋಟೋಸ್ ಶೇರ್ ಮಾಡಿದ್ದಾರೆ.
2/ 7
ಬ್ಲೂ ಕಲರ್ ಡೆನಿಮ್ ಹಾಗೂ ಹಳದಿ ಬಣ್ಣದ ಬಲೂನ್ ಹ್ಯಾಂಡ್ನ ಸ್ಟೈಲಿಷ್ ಹಾಗೂ ಅಷ್ಟೇ ಕ್ಯೂಟ್ ಆಗಿರುವ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ ನಟಿ. ಆಫ್ ಶೋಲ್ಡರ್ ಟಾಪ್ನಲ್ಲಿ ಕಾಣಿಸಿಕೊಂಡ ನಟಿ ಚಳಿಗಾಲಯದ ಉದಯಿಸೋಸೂರ್ಯನಂತೆ ಸುಂದರವಾಗಿ ಕಾಣಿಸಿದ್ದಾರೆ.
3/ 7
ಇದು ಸ್ಟ್ರಾಪ್ಲೆಸ್ ಆಗಿದ್ದು ಬೋಲ್ಡ್ ಸ್ವೀಟ್ಹಾರ್ಟ್ ನೆಕ್ಲೈನ್ ಇದರ ಹೈಲೈಟ್. ಇಂಡಿಯನ್ ಸಿಲ್ಕ್ನ ತುಂಬಾ ಸುಂದರವಾದ ಈ ಉಡುಪನ್ನು ಲೇಬಲ್ ಮಲಿ ಸಿದ್ಧಪಡಿಸಿದೆ.
4/ 7
ಡೀಪ್ ಹಾರ್ಟ್ ನೆಕ್ ಇದ್ದು ಇದಕ್ಕೆ ನಟಿ ಚೈನ್ ಏನೂ ಧರಿಸಿಲ್ಲ. ಇಯರಿಂಗ್ಸ್ ಮಾತ್ರ ಧರಿಸಿ ಸಿಂಪಲ್ ಮೇಕಪ್ ಮಾಡಿದ್ದರು. ಹೇರ್ಸ್ಟೈಲ್ ಕೂಡಾ ಸಿಂಪಲ್ ಆಗಿತ್ತು.
5/ 7
ಈ ಟಾಪ್ ನೀವೂ ಖರೀದಿಸಬಹುದು. ಈ ಟಾಪ್ ಹೆಸರು ವಿಕಾ ಟಾಪ್. ಇದಕ್ಕೆ 20 ಸಾವಿರ ರೂಪಾಯಿ ಬೆಲೆ ಇದ್ದು ಇದನ್ನು ಮಲಿ ವೆಬ್ಸೈಟ್ನಲ್ಲಿ ಖರೀದಿಸಬಹುದು. ಈ ಟಾಪ್ ಧರಿಸಿ ನೀಲಿ ಡೆನಿಮ್ ಜೊತೆ ಹೀಲ್ಸ್ ಧರಿಸಿದ್ದರು ಅನುಷ್ಕಾ.
6/ 7
ನಟಿ ಇಷ್ಟೊಂದು ಚಂದದ ಉಡುಪುವನ್ನು ಧರಿಸಿದ್ದರೂ ಟ್ರೋಲ್ ಆಗಿದ್ದಾರೆ. ಗಾಳಿ ಬಂದಾಗ ನಟಿಯ ಟಾಪ್ ಹಾರಿದ್ದು ನೀವೇನು ವಮಿಕಾಳ ಡ್ರೆಸ್ ಧರಿಸಿಕೊಂಡು ಬಂದಿದ್ದೀರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
7/ 7
ಅನುಷ್ಕಾ ಶರ್ಮಾ ಅವರ ಈ ಫೋಟೋಸ್ ವೈರಲ್ ಆಗಿದ್ದು ಈಗಾಗಲೇ 2 ಮಿಲಿಯನ್ ಲೈಕ್ಸ್ ಗಳಿಸಿದೆ. 6 ಸಾವಿರದಷ್ಟು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.