Anushka Sharma: 3 ತಿಂಗಳ ಇಂಗ್ಲೆಂಡ್ ಪ್ರವಾಸದ ಬಳಿಕ ಮತ್ತೆ ಶೂಟಿಂಗ್ಗೆ ಮರಳಿದ ಅನುಷ್ಕಾ ಶರ್ಮಾ; ಫೋಟೋಗಳು ವೈರಲ್
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಶೂಟಿಂಗ್ಗೆ ಮರಳಿದ್ದಾರೆ. ಪತಿ ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಟೂರ್ನಮೆಂಟ್ಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ನಟಿ ಭಾರತಕ್ಕೆ ಮರಳಿದ್ದಾರೆ. ಮುಂಬೈಗೆ ಬರುತ್ತಿದ್ದಂತೆ ನಟಿ ತಮ್ಮ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Photos Credit: Viral Bhayani)
ಇಂಗ್ಲೆಂಡ್ -ಭಾರತ ಕ್ರಿಕೆಟ್ ಟೂರ್ನಮೆಂಟ್ಗಾಗಿ ಮಗಳು ವಮಿಕಾ ಜೊತೆ ನಟಿ ಅನುಷ್ಕಾ ಕೂಡ ಪತಿ ಜೊತೆ ಇಂಗ್ಲೆಡ್ ಪ್ರವಾಸ ನಡೆಸಿದ್ದರು. ಇದೀಗ ತಮ್ಮ ದೈನಂದಿನ ಜೀವನಕ್ಕೆ ಮರಳಿರುವ ಅವರು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
2/ 6
ಇಂಗ್ಲೆಂಡ್ ಪ್ರವಾಸದ ವೇಳೆ ಕೂಡ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗ್ಗಿಂದಾಗೆ ಪತಿ ಮತ್ತು ಮಗಳು ಸೇರಿದಂತೆ ಅನೇಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದರು.
3/ 6
ಇನ್ನು ಇಂಗ್ಲೆಂಡ್ ಪ್ರವಾಸದ ವೇಳೆ ನಟಿ ಅನುಷ್ಕಾ ನಟಿ ಸೋನಂ ಕಪೂರ್ ಸಲಹೆಯಂತೆ ಹೊಸ ಹೇರ್ಸ್ಟೈಲ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ವಿಚಾರವನ್ನು ಖುದ್ದು ಅನುಷ್ಕಾ ತಿಳಿಸಿದ್ದು, ಈ ಮೂಲಕ ಬಾಣಂತಿ ಕೂದಲ ಸಮಸ್ಯೆಗೆ ಪರಿಹಾರ ಕಂಡುಕೊಂಡೆ ಎಂದಿದ್ದರು.
4/ 6
ಈ ತಿಂಗಳ ಆರಂಭದಲ್ಲಿ ಭಾರತದ ಎಲ್ಲಾ ಕ್ರಿಕೆಟಿಗರು ಸ್ವದೇಶಕ್ಕೆ ಮರಳಿದ್ದರು. ಇದಾದ ಬಳಿಕ ಅವರು ಸದ್ಯ ಐಪಿಎಲ್ ಮ್ಯಾಚ್ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ವಿರಾಟ್ ಐಪಿಎಲ್ನಲ್ಲಿ ಮುಳುಗಿದ್ದರೆ, ಇತ್ತ ಅನುಷ್ಕಾ ತಮ್ಮ ಕೆಲಸಕ್ಕೆ ಮರಳಿದ್ದಾರೆ.
5/ 6
ಬಿಳಿ ಬಣ್ಣದ ಟಿಶರ್ಟ್ ಡಂಗ್ರಿ ಡ್ರೆಸ್ನಲ್ಲಿ ನಟಿ ಅನುಷ್ಕಾ ಕಂಡಿದ್ದು, ಎಲ್ಲರ ಮನಸೊರೆಗೊಂಡಿದ್ದಾರೆ. ತಾಯ್ತನದ ಹಿನ್ನಲೆ ಅವರು ಚಿತ್ರಗಳಿಂದ ಬ್ರೇಕ್ ಪಡೆದಿದ್ದರು.
6/ 6
ಇದರ ನಡುವೆ ತಮ್ಮದೇ ಆದ ಅನೇಕ ವೆಬ್ ಸರಣಿಗಳನ್ನು ನಿರ್ಮಾಣ ಮಾಡಿ ಅನುಷ್ಕಾ ಗಮನಸೆಳೆದಿದ್ದರು. ನಟಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ