Anushka Sharma: ನಾನು ನಿಮ್ಮ ಬ್ರಾಂಡ್ ಅಂಬಾಸಿಡರ್ ಅಲ್ಲ, ಪ್ರತಿಷ್ಠಿತ ಕಂಪನಿ ವಿರುದ್ಧ ಅನುಷ್ಕಾ ಶರ್ಮಾ ಫುಲ್ ಗರಂ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka sharma) ಸದ್ಯ ಹೊಸ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಅನುಷ್ಕಾ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೀಗ ಒಂದು ಬ್ರ್ಯಾಂಡ್ ಕಂಪನಿ ವಿರುದ್ಧ ಅನುಷ್ಕಾ ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಅನುಷ್ಕಾ ಪೋಸ್ಟ್ ಒಂದನ್ನು ಶೇರ್ ಮಾಡಿ ಬೇಸರ ಹೊರಹಾಕಿದ್ದಾರೆ. ಕಳೆದ ಕೆಲವು ದಿನಗಳಿಂದ ಅನುಷ್ಕಾ ಚಕ್ಡಾ ಎಕ್ಸ್ ಪ್ರೆಸ್ ಚಿತ್ರದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
2/ 8
ಅನುಷ್ಕಾ ಶೇರ್ ಮಾಡಿದ ಪೋಸ್ಟ್ನನ್ನು ಪ್ರಸಿದ್ಧ ಬ್ರಾಂಡ್ ಕಂಪನಿ ಬಳಸಿಕೊಂಡಿದ್ಯಂತೆ. ಇದಕ್ಕೆ ಅನುಷ್ಕಾ ಫುಲ್ ಗರಂ ಆಗಿದ್ದಾರೆ.
3/ 8
ಅನುಷ್ಕಾ ಫೇಮಸ್ ಬ್ರ್ಯಾಂಡ್ ಕಂಪನಿ ಬಗ್ಗೆ ಕಿಡಿಕಾರಿದ್ದಾರೆ. ಪೂಮಾ ಬ್ರ್ಯಾಂಡ್ ತನ್ನ ಅನುಮತಿಯಿಲ್ಲದೆ ಫೋಟೋವನ್ನು ಬಳಸಿದ್ದಕ್ಕೆ ಅನುಷ್ಕಾ ಸಿಟ್ಟಾಗಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದಾರೆ.
4/ 8
ಹೇ ಪೂಮಾ ಇಂಡಿಯಾ? ನೀವು ನನ್ನ ಫೋಟೋವನ್ನು ನಿಮ್ಮ ಪ್ರಚಾರಕ್ಕಾಗಿ ಬಳಸಿದ್ದೀರಾ. ಆದರೆ ಫೋಟೋವನ್ನು ಬಳಸುವ ಮೊದಲು ನೀವು ನನ್ನ ಅನುಮತಿಯನ್ನು ಪಡೆಯಬೇಕು ಎಂದಿದ್ದಾರೆ. ಯಾಕೆಂದ್ರೆ ನಾನು ನಿಮ್ಮ ಬ್ರಾಂಡ್ ಅಂಬಾಸಿಡರ್ ಅಲ್ಲ. ದಯವಿಟ್ಟು ಈ ಪೋಸ್ಟ್ ತೆಗೆಯಿರಿ ಎಂದು ಅನಿಷ್ಕಾ ಪೋಸ್ಟ್ ಮೂಲಕ ಹೇಳಿದ್ದಾರೆ.
5/ 8
ಜನರನ್ನು ತನ್ನತ್ತ ಸೆಳೆಯಲು ವಿನೂತವಾಗಿ ಸ್ಟ್ರಾಟಜಿ ಮಾಡಲು ಹೋಗಿ ಪೂಮಾ ಕಂಪನಿ ಎಡವಟ್ಟು ಮಾಡಿದ್ದು, ಅನುಷ್ಕಾ ಕೆಂಗಣ್ಣಿಗೆ ಗುರಿಯಾಗಿದೆ.
6/ 8
ಅನುಮತಿಯಿಲ್ಲದೆ ಫೋಟೋ ಶೇರ್ ಮಾಡಿದ್ದಕ್ಕೆ ಅನುಷ್ಕಾ ಸಿಟ್ಟಾಗಿ ಪೋಸ್ಟ್ ಮಾಡಿದ್ದು ಬಳಿಕ ಪೂಮಾ ಇಂಡಿಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಫೋಟೋವನ್ನು ಡಿಲೀಟ್ ಮಾಡಿದೆ.
7/ 8
ಅನುಷ್ಕಾ ಅವರ ಚಿತ್ರ ಚಕ್ಡಾ ಎಕ್ಸ್ ಪ್ರೆಸ್ 2023 ರಲ್ಲಿ ಬಿಡುಗಡೆಯಾಗಲಿದ್ದು, ಅನುಷ್ಕಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
8/ 8
ಈ ಸಿನಿಮಾ ಭಾರತೀಯ ಕ್ರಿಕೆಟ್ನ ಅತ್ಯಂತ ವೇಗದ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯಾದರಿತ ಕಥೆಯಾಗಿದೆ.