ಅವರು ನನಗೆ ಅವರ ಸರಿಯಾದ ಮಾಹಿತಿ ಕೊಟ್ಟರು. ಸ್ಕ್ರಿಪ್ಟ್ ಓದುವುದರ ಬಗ್ಗೆಯೂ ಆಸಕ್ತಿ ವ್ಯಕ್ತಪಡಿಸಿದರು. ಆದರೆ ಶೂಟಿಂಗ್ ಮಾಡಬೇಕೆನ್ನುವಾಗ ನಾವೆಲ್ಲರೂ ಲಾಕ್ ಆದೆವು. ಅವರು ಕೆನೆಡಿ ಎಂಬ ಹೆಸರು ಬಳಸಲು ಅನಮತಿ ನೀಡಿದರು. ಈ ಘಟನೆಯ ಬಿಹೈಂಡ್ ಸ್ಟೋರಿ ಅಷ್ಟೇ ನಾನು ಸಂದರ್ಶನದಲ್ಲಿ ಹೇಳಿದರು. ಇದಕ್ಕೆ ಯಾವುದೇ ಓವರ್ ರಿಯಾಕ್ಷನ್ ಕೊಡುವ ಅಗತ್ಯವಿಲ್ಲ. ನನಗನಿಸಿದಂತೆ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡದೆ ನಿವೃತ್ತರಾಗುವುದಿಲ್ಲ ಎಂದಿದ್ದಾರೆ.
ರಾಹುಲ್ ಭಟ್ ನಟಿಸಿದ ಕೆನೆಡಿ ಪಾತ್ರ ಚಿಯಾನ್ಗಾಗಿ ಬರೆಯಲಾಗಿತ್ತು ಎಂದು ಅನುರಾಗ್ ಕಷ್ಯಪ್ ರಿವೀಲ್ ಮಾಡಿದ್ದಾರೆ. ನಾನು ಸಂಪೂರ್ಣವಾಗಿ ಲಭ್ಯವಿರುವ ವ್ಯಕ್ತಿಯನ್ನಷ್ಟೇ ನನ್ನ ಸಿನಿಮಾಗೆ ಆಯ್ಕೆ ಮಾಡುತ್ತೇನೆ. ನಾನು ಕೆನೆಡಿಯನ್ನು ರಾಹುಲ್ಗಾಗಿ ಬರೆದಿರಲಿಲ್ಲ. ಚಿಯಾನ್ ವಿಕ್ರಂಗಾಗಿ ಬರೆದಿದ್ದೆ. ಆದರೆ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ.