Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

ಕಿರುತೆರೆಯ ಜನಪ್ರಿಯ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಟ ನಿತೇಶ್ ಪಾಂಡೆ ಅವರಿಗೆ 51 ವರ್ಷ ವಯಸ್ಸಾಗಿತ್ತು. ನಟನ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ.

First published:

 • 17

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟರಾಗಿದ್ದ ನಿತೇಶ್ ಪಾಂಡೆ, ಹಿರಿತೆರೆಯಲ್ಲೂ ಒಳ್ಳೆಯ ಹೆಸರು ಮಾಡಿದ್ರು. ನಿತೇಶ್ ಪಾಂಡೆ ಈ ಸಾವಿನ ಸುದ್ದಿ ಸಾಕಷ್ಟು ದುಃಖ ತಂದಿದೆ. 1995ರಿಂದಲೂ ನಿತೇಶ್ ಪಾಂಡೆ ಬಣ್ಣದ ಲೋಕದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

  MORE
  GALLERIES

 • 27

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ಧಾರಾವಾಹಿಗಳ ಜೊತೆ ಅನೇಕ ಜನಪ್ರಿಯ ಸಿನಿಮಾಗಳಲ್ಲಿಯೂ ನಿತೇಶ್ ನಟಿಸಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್​ನಲ್ಲಿ ಪ್ರಸಾರವಾಗುವ ‘ಅನುಪಮಾ’ ಧಾರಾವಾಹಿಯಲ್ಲಿ ನಟ ಜನಪ್ರಿಯರಾಗಿದ್ರು. ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಪಾತ್ರವನ್ನು ನಿರ್ವಹಿಸಿದ್ರು.

  MORE
  GALLERIES

 • 37

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ‘ಪ್ಯಾರ್ ಕ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಇದೀಗ ನಟ ನಿತೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ಅಘಾತ ಉಂಟುಮಾಡಿದೆ.

  MORE
  GALLERIES

 • 47

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ನಿತೇಶ್ ಅವರ ಭಾವ, ನಿರ್ಮಾಪಕ ಸಿದ್ದಾರ್ಥ್ ನಗರ್ ನಿತೇಶ್ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಿತೇಶ್ ಪತ್ನಿ ಅರ್ಪಿತಾ ಪಾಂಡೆ ಕೂಡ ಶಾಕ್​ನಲ್ಲಿದ್ದಾರೆ. ನನ್ನ ಸಹೋದರಿ ಅರ್ಪಿತಾ ಜೊತೆ ನನಗೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

  MORE
  GALLERIES

 • 57

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ನಿತೇಶ್ ಪಾಂಡೆ 17 ಜನವರಿ 1973 ರಂದು ಜನಿಸಿದರು. ನಟನಾಗಬೇಕು ಎಂಬ ಆಸೆ ಹೊತ್ತ ನಿತೇಶ್, 1990 ರಲ್ಲಿ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ನಂತರ ಟಿವಿ ಲೋಕಕ್ಕೆ ಕಾಲಿಟ್ಟರು. 

  MORE
  GALLERIES

 • 67

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  'ಮಂಜಿಲೆ ಅಪ್ನಿ ಅಪ್ನಿ', 'ಅಸ್ತಿತ್ವ ಏಕ್ ಪ್ರೇಮ್ ಕಹಾನಿ', 'ಸಾಯಾ', 'ಜಸ್ಟ್ಜು', 'ದುರ್ಗಾ ನಂದಿನಿ' ಮುಂತಾದ ಶೋಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.

  MORE
  GALLERIES

 • 77

  Nitesh Pandey: ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ನಿಧನ, ಗಣ್ಯರ ಸಂತಾಪ

  ನಿತೇಶ್ ಅವರ ಸ್ವಂತ ನಿರ್ಮಾಣ ಸಂಸ್ಥೆಯೂ ಇದೆ. ನಿತೇಶ್ 1998 ರಲ್ಲಿ ನಟಿ ಅಶ್ವಿನಿ ಕಲೇಸ್ಕರ್ ಅವರನ್ನು ವಿವಾಹವಾಗಿದ್ರು. 

  MORE
  GALLERIES