Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ನಟ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ ಭಾಗಿಯಾಗಿದ್ರು. ಕಾಂತಾರ ಸಿನಿಮಾ ನಟ ರಿಷಬ್​ಗೆ ಗೇಮ್ ಚೇಂಜರ್ ಪ್ರಶಸ್ತಿ ಸಿಕ್ಕಿದೆ. ಅವಾರ್ಡ್ ಸಿಕ್ಕ ಖುಷಿಯಲ್ಲಿ ರಿಷಬ್ ಶೆಟ್ಟಿ ಮಾತಾಡಿದ್ದಾರೆ.

First published:

 • 18

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲೇ ಇತಿಹಾಸ ಸೃಷ್ಟಿಸಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್​ನಲ್ಲಿ ಅಬ್ಬರಿಸಿದ ಕಾಂತಾರ ಸಿನಿಮಾ OTTಯಲ್ಲೂ ಭರ್ಜರಿ ಪ್ರದರ್ಶನ ಕಂಡಿದೆ. ಕಾಂತಾರ ಸಿನಿಮಾ ಹುಡುಕಿಕೊಂಡು ಪ್ರಶಸ್ತಿಗಳ ಹೊಳೆಯೇ ಹರಿದು ಬರ್ತಿದೆ.

  MORE
  GALLERIES

 • 28

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಸಾಲು ಸಾಲು ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಒಟಿಟಿ  ಚೇಂಜ್ ಮೇಕರ್ಸ್​ ಕಾರ್ಯಕ್ರಮದಲ್ಲಿ ಗೇಮ್ ಚೇಂಜರ್ ಅವಾರ್ಡ್ ಪಡೆದಿದ್ದಾರೆ. ವೇದಿಕೆ ಮೇಲೆ ಅವಾರ್ಡ್ ಸ್ವೀಕರಿಸಿ ಮಾತಾಡಿದ ನಟ ರಿಷಬ್ ಶೆಟ್ಟಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

  MORE
  GALLERIES

 • 38

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಪ್ರೇಕ್ಷಕರು ನನ್ನ ಪಾಲಿಗೆ ಗೇಮ್ ಚೇಂಜರ್ ಎಂದು ರಿಷಬ್ ಶೆಟ್ಟಿ ಹೇಳಿದ್ರು. ನಟನ ಈ ಮಾತಿಗೆ ವೇದಿಕೆಯಲ್ಲಿ ಗಣ್ಯರು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲು ಕಾಂತಾರ ರಿಲೀಸ್ ಆಗಿದ್ದು ಕನ್ನಡದಲ್ಲಿ, ಕನ್ನಡಿಗರು ಸಿನಿಮಾ ಗೆಲ್ಲಿಸಿದ್ದಾರೆ ಎಂದು ರಿಷಬ್ ಹೇಳಿದ್ದಾರೆ.

  MORE
  GALLERIES

 • 48

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಪ್ರಶಸ್ತಿ ಪಡೆದ ಫೋಟೋ ಹಾಗೂ ವಿಡಿಯೋಗಳನ್ನು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಗರ ಆಶೀರ್ವಾದ ಮತ್ತು ಬೆಂಬಲಕ್ಕೆ ನಾನು ಸದಾ ಚಿರಋಣಿ ಎಂದು ರಿಷಬ್ ಬರೆದುಕೊಂಡಿದ್ದಾರೆ.

  MORE
  GALLERIES

 • 58

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ರಿಷಬ್ ಶೆಟ್ಟಿ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಕಾಂತಾರ 2 ಸಿನಿಮಾ ಅನೌನ್ಸ್ ಮಾಡಿರುವ ರಿಷಬ್ ಶೆಟ್ಟಿ, ಸಿನಿಮಾ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಕಾಂತಾರ 2 ಸಿನಿಮಾ ಸೆಟ್ಟೇರಲಿದೆ.

  MORE
  GALLERIES

 • 68

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾದಲ್ಲಿ ಲೀಲಾ ಆಗಿ ನಟಿಸಿದ್ದ ಸಪ್ತಮಿ ಗೌಡ ಅವರಿಗೆ 'ರೈಸಿಂಗ್ ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿ ಲಭಿಸಿದೆ. ನಟಿ ತುಂಬಾ ಖುಷಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಫೊಟೋ ಹಂಚಿಕೊಂಡಿದ್ದಾರೆ.

  MORE
  GALLERIES

 • 78

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ನನಗೆ ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಚೇಂಜ್ ಮೇಕರ್ಸ್ ಗೆ ನನ್ನ ಧನ್ಯವಾದ , ಸ್ಪೆಷಲ್ ಥ್ಯಾಂಕ್ಸ್ ಟು ರಿಷಬ್ ಶೆಟ್ಟಿ ಸರ್, ಹೊಂಬಾಳೆ ಫಿಲ್ಮ್ಸ್ ಹಾಗೂ ನನ್ನ ಕುಟುಂಬದವರಿಗೆ ಎಂದು ಸಪ್ತಮಿ ಗೌಡ  ಬರೆದುಕೊಂಡಿದ್ದಾರೆ.

  MORE
  GALLERIES

 • 88

  Rishab Shetty: ಕಾಂತಾರ ಕಿರೀಟಕ್ಕೆ ಮತ್ತೊಂದು ಗರಿ! ಕನ್ನಡಿಗರೇ ನನ್ನ ಪಾಲಿನ ಗೇಮ್ ಚೇಂಜರ್ ಎಂದ್ರು ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಲಕ್ ಬದಲಾಗಿದ್ದು, ಸಿನಿಮಾ ಆಫರ್ಗಳ ಸುರಿಮಳೆಯಾಗಿದೆ. ಬಾಲಿವುಡ್ಗೆ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ಸಪ್ತಮಿ ಕೈಯಲ್ಲಿವೆ.

  MORE
  GALLERIES