Arjun Sarja Hanuman Temple: ಆಂಜನೇಯ ಸ್ವಾಮಿ ದೇವಾಯಲ ನಿರ್ಮಿಸಿದ ನಟ ಅರ್ಜುನ್ ಸರ್ಜಾ: ಕುಂಭಾಭಿಷೇಕ ವೀಕ್ಷಿಸಲು ಇಲ್ಲಿದೆ ಅವಕಾಶ..! Arjun Sarja Anjaneya Temple: ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರ ಕುಟುಂಬ ನಿರ್ಮಿಸುತ್ತಿರುವ ಆಂಜನೇಯ ದೇವಾಲಯದ ಕೆಲಸಗಳು ಪೂರ್ಣಗೊಂಡಿದೆ. ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. (ಚಿತ್ರಗಳು ಕೃಪೆ: ಅರ್ಜುನ್ ಸರ್ಜಾ ಹಾಗೂ ಐಶ್ವರ್ಯಾ ಸರ್ಜಾ ಇನ್ಸ್ಟಾಗ್ರಾಂ ಖಾತೆ)
1 / 13
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುಟುಂಬ ನಿರ್ಮಿಸುತ್ತಿರುವ ಆಂಜನೇಯ ಸ್ವಾಮಿದೇವಾಲಯ ಈಗ ಪೂರ್ಣಗೊಂಡಿದೆ.
2 / 13
ಈ ಸಿಹಿ ಸುದ್ದಿಯನ್ನು ಅರ್ಜುನ್ ಸರ್ಜಾ ಅವರು ಒಂದು ವಿಡಿಯೋ ಮೂಲಕ ನೀಡಿದ್ದಾರೆ.
3 / 13
ಚೆನ್ನೈನಲ್ಲಿ ನಿರ್ಮಿಸಿರುವ ಆಂಜನೇಯ ದೇವಾಲಯದ ಕೆಲಸ ಪೂರ್ಣವಾಗಿದ್ದು, ಅದರ ಕುಂಭಾಭಿಷೇಕ ಸದ್ಯಲ್ಲೇ ನಡೆಯಲಿದೆಯಂತೆ.
4 / 13
ಹೌದು, ದೇವಾಲಯದ ಉದ್ಘಾಟನೆ ಹಾಗೂ ಕುಂಭಾಭಿಷೇಕಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
5 / 13
ಅರ್ಜುನ್ ಸರ್ಜಾ ಅವರು ಖುದ್ದು ದೇವಾಲಯದ ನಿರ್ಮಾಣದಲ್ಲಿ ತೊಡಗಿದ್ದ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು.
6 / 13
ದೇವಾಲಯದ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಜುಲೈ 1 ಮತ್ತು 2ರಂದು ಉದ್ಘಾಟನೆ ಹಾಗೂ ಕುಂಭಾಭಿಷೇಕ ನಡೆಯಲಿದೆ.
7 / 13
ದೇವಾಲಯ ಚೆನ್ನೈನಲ್ಲಿದ್ದು, ಅಲ್ಲೇ ಈ ಕಾರ್ಯಕ್ರಮಗಳು ನಡೆಯಲಿವೆ.
8 / 13
ಕೊರೋನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅರ್ಜುನ್ ಸರ್ಜಾ.
9 / 13
ಅದಕ್ಕೆ ಕುಂಭಾಭಿಷೇಕ ನಡೆಯುವಾಗ ಅದನ್ನು ಯೂಟ್ಯೂಬ್ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುವುದು ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.
10 / 13
ಇರುವಲ್ಲಿಯೇ ಕುಳಿತು ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
11 / 13
ಅರ್ಜುನ್ ಸರ್ಜಾ ಅವರ ಈ ಯೂಟ್ಯೂಬ್ ಚಾನಲ್ನಲ್ಲಿ ಲೈವ್ ಪ್ರಸಾರಗೊಳ್ಳಲಿದೆ. https://www.youtube.com/channel/UCvrodPUhIkTCfo0YdjcfUcg
12 / 13
ಅರ್ಜುನ್ ಸರ್ಜಾ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
13 / 13
ತಮಿಳಿನ ಫ್ರೆಂಡ್ಸ್ ಹಾಗೂ ಮಲಯಾಳಂನ ಮರಕ್ಕರ್ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ ಅರ್ಜುನ್ ಸರ್ಜಾ.
First published: June 29, 2021, 17:28 IST