ನಾನು ಹೀರೋಯಿನ್ ಆಗಬೇಕು ಅಂತ ಈ ಚಿತ್ರರಂಗಕ್ಕೆ ಬಂದೆ. ಆದರೆ ಆರಂಭದಲ್ಲಿಯೇ ಕಾದಂಬರಿ ಧಾರಾವಾಹಿಯಲ್ಲಿಯೇ ನೆಗೆಟಿವ್ ಶೇಡ್ ಮಾಡಿದೆ. ಪದೇ ಪದೇ ನೆಗೆಟಿವ್ ಪಾತ್ರ ಬಂದರೂ ಕೂಡ ನನ್ನ ಯಾರೂ ಸ್ಟಾಪ್ ಮಾಡುವವರೂ ಇರಲಿಲ್ಲ. ನನಗೆ ಯಾರೂ ಸಲಹೆ ನೀಡುವವರೂ ಇರಲಿಲ್ಲ. ನಾನು ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟೆ. ನೆಗೆಟಿವ್ ಶೇಡ್ ಮಾಡೋದು ನನ್ನ ಬದುಕನ್ನು ಹೇಗೆ ರೂಪಿಸುತ್ತದೆ ಎಂಬುದೇ ಗೊತ್ತಿರಲಿಲ್ಲ ಎಂದಿದ್ದಾರೆ ನಟಿ.
ನಾನು ಈ ರೀತಿಯ ನೆಗೆಟಿವಿಟಿಗಳನ್ನು ತಿರಸ್ಕರಿಸುತ್ತಿದ್ದೆ. ವಿಲನ್ ಪಾತ್ರ ಆದರೂ ತುಂಬ ಆಲೋಚಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಇನ್ನೂ ಕೆಲವೊಮ್ಮೆ ತೆರೆ ಮೇಲೆ ವಿಲನ್ ಆಗಿ ಕಾಣಿಸಿಕೊಳ್ಳೋದು ಬೇಡ ಅಂತ ಕೂಡ ಅಂದುಕೊಂಡಿದ್ದೆ. ನನಗೆ ಈ ಪಾತ್ರಗಳನ್ನು ಮಾಡಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಆದರೆ ಇವೆಲ್ಲ ನನಗೆ ಈಗಲೂ ಚುಚ್ಚುತ್ತಿವೆ ಎಂದು ಅನಿಕಾ ಸಿಂಧ್ಯ ಹೇಳಿದ್ದಾರೆ ಎಂದು ವಿಜಯಕರ್ನಾಟಕ.ಕಾಂ ವರದಿ ಮಾಡಿದೆ.