ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇವರು ಜೀ ಕನ್ನಡಸದ ಫೇಮಸ್ ಆ್ಯಂಕರ್. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ.
2/ 8
ಅನುಶ್ರೀ ಅವರು ತಮ್ಮ ಅದ್ಭುತವಾದ ಮಾತಿನಿಂದ ಈಡೀ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಸರಿಗಮಪ ಲಿಟಲ್ ಚಾಂಪ್ಸ್ ನಿರೂಪಣೆ ಮಾಡ್ತಾ ಇದ್ದಾರೆ. ಅಲ್ಲೂ ಅನುಶ್ರೀ ಮಾತು ಕೇಳಲು ಎಷ್ಟೊಂದು ಜನ ಕಾರ್ಯಕ್ರಮ ನೋಡ್ತಾರೆ.
3/ 8
ಎಲ್ಲರಿಗೂ ಅನುಶ್ರೀ ಅವರ ಬಗ್ಗೆ ಒಂದು ಪ್ರಶ್ನೆ ಕಾಡ್ತಾ ಇದೆ. ಅನುಶ್ರೀ ಅವರು ಯಾವಾಗ ಮದುವೆ ಆಗ್ತಾರೆ ಅನ್ನೋದು. ಈ ಪ್ರಶ್ನೆಯನ್ನು ಅವರಿಗೆ ಹಲವು ಬಾರಿ ಕೇಳಿದ್ದಾರೆ.
4/ 8
ಜನವರಿ 13ರಂದು ಚಿಕ್ಕಬಳ್ಳಾಪುರ ಉತ್ಸವ ಅದ್ದೂರಿಯಾಗಿ ನಡೆದಿದೆ. ಚಿಕ್ಕಬಳ್ಳಾಪುರ ಉತ್ಸವವನ್ನು ನಡೆಸಿಕೊಟ್ಟಿದ್ದು ನಿರೂಪಕಿ ಅನುಶ್ರೀ ಅವರಿಗೆ ವೇದಿಕೆ ಮೇಲೆ ಮದುವೆ ಪ್ರಪೋಸಲ್ ಬಂದಿದೆ.
5/ 8
ಅನುಶ್ರೀ ಮಾತನಾಡುತ್ತಾ, ಚಿಕ್ಕಬಳ್ಳಾಪುರದಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ರೆ ಹುಡುಕೋಣ ಅಂತಾರೆ. ಆಗ ಜನ ನಾವು ಇದೀವಿ ಅಂತ ಕೂಗ್ತಾರೆ. ಅನುಶ್ರೀ ಅವರಿಗೆ ರೇಗಿಸುತ್ತಾರೆ.
6/ 8
ತಲೆಯಲ್ಲಿ ಕೂದಲಿಲ್ಲ ನನ್ನ ಮದುವೆ ಆಗ್ತೀರಾ ಎಂದು ಅಲ್ಲಿನ ವ್ಯಕ್ತಿಯೊಬ್ಬರಿಗೆ ಅನುಶ್ರೀ ಕಾಲೆಳೆಯುತ್ತಾರೆ. ನಂತರ ಕಾಂತಾರ ಚಿತ್ರದ ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ ಎಂದು ಡೈಲಾಗ್ ಹೇಳ್ತಾರೆ. ಅದನ್ನು ಕೇಳಿ ಜನ ಎಲ್ಲಾ ನಗ್ತಾರೆ.
7/ 8
ಇನ್ನೊಬ್ಬರಿಗೆ, ಚೆನ್ನಾಗಿದೆ ನೀನು. ಲೀಸ್ಟ್ ನಲ್ಲಿ ಇದೀಯಾ, ನಿನ್ನ ನಂಬರ್ ಕಳಿಸು ವಾಟ್ಸಾಪ್ ನಲ್ಲಿ ಎಂದು ಅನುಶ್ರೀ ಮತ್ತೊಬ್ಬ ಹುಡುಗನಿಗೆ ರೇಗಿಸುತ್ತಾರೆ. ಮದುವೆ ಅರ್ಜೆಂಟ್ ಇಲ್ಲ. ನೋಡಿದ ತಕ್ಷಣ ಮದುವೆ ಆಗಲು ಆಗುತ್ತಾ ಎಂದು ನಕ್ಕಿದ್ದಾರೆ.
8/ 8
ಅನುಶ್ರೀ ಅವರು ತಮ್ಮ ಮದುವೆ ಬಗ್ಗೆ ಇನ್ನೂ ಅಷ್ಟಾಗಿ ಯೋಚನೆ ಮಾಡಿದಂತೆ ಕಾಣುವುದಿಲ್ಲ. ಒಳ್ಳೆ ಹುಡುಗ ಸಿಕ್ಕಿ, ನಿಮ್ಮ ಜೀವನ ಚೆನ್ನಾಗಿರಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.