Anasuya: ಪುಷ್ಪಾ ನಟಿಯ ಕೈಯ್ಯಲ್ಲಿ ಮದ್ಯದ ಗ್ಲಾಸ್! ನೆಟ್ಟಿಗರು ಶಾಕ್
Anchor Anasuya : ಪುಷ್ಪಾ ಸಿನಿಮಾ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ ನಟಿ ಅನಸೂಯ ಅವರು ಈ ಬಾರಿ ಅವರ ಫಾಲೋವರ್ಸ್ಗೆ ಶಾಕ್ ಕೊಟ್ಟಿದ್ದಾರೆ. ನಟಿಯ ಕೈಯ್ಯಲ್ಲಿ ಮದ್ಯದ ಗ್ಲಾಸ್ ನೋಡಿ ಜನ ಕಣ್ಕಣ್ ಬಿಟ್ಟಿದ್ದಾರೆ.
ಪುಷ್ಪಾ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅನಸೂಯ ಅವರು ಸಖತ್ ಬೋಲ್ಡ್ ಎನ್ನುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಟಾಲಿವುಡ್ನಲ್ಲಿ ಸದ್ಯ ಒಳ್ಳೊಳ್ಳೆ ಅವಕಾಶ ಗಿಟ್ಟಿಸಿಕೊಳ್ತಿರೋ ನಟಿ ಈಕೆ.
2/ 7
ಆದರೆ ನಟಿಯ ಇತ್ತೀಚಿನ ಫೋಟೋ ನೋಡಿ ಅವರ ಫಾಲೋವರ್ಸ್ ಅಚ್ಚರಿಪಟ್ಟಿದ್ದಾರೆ. ಕೈಯ್ಯಲ್ಲಿ ವೈನ್ ಗ್ಲಾಸ್ ಹಿಡಿದಿರುವ ಅನಸೂಯ ಅವರನ್ನು ನೋಡಿ ಅವರ ಅವರ ಅಭಿಮಾನಿಗಳು ಕಣ್ಕಣ್ ಬಿಟ್ಟಿದ್ದಾರೆ.
3/ 7
ನಟಿ ಜೋರಾಗಿ ಬಾಯಿಗೆ ಕೈ ಅಡ್ಡ ಹಿಡಿದು ನಗುತ್ತಾ ಒಂದು ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿದ್ದಾರೆ. ನಟಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.
4/ 7
ನಟಿ ಅನಸೂಯ ಅವರು ಸುಂದರವಾದ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರ ಬೋಲ್ಡ್ ಫೋಟೋಶೂಟ್ಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
5/ 7
ಆದರೆ ನಟಿ ವೈನ್ ಗ್ಲಾಸ್ ಜೊತೆ ಕಾಣಿಸಿಕೊಂಡಿದ್ದು ಮಾತ್ರ ಅಪರೂಪ. ಅನಸೂಯಾ ಕೆರಿಯರ್ ವಿಚಾರಕ್ಕೆ ಬಂದರೆ ಈ ಆ್ಯಂಕರ್ ಕಿರುತೆರೆ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಸಿನಿಮಾ ಹಾಗೂ ವೆಬ್ ಸೀರೀಸ್ ಗೆ ಆದ್ಯತೆ ನೀಡುತ್ತಿದ್ದಾರೆ.
6/ 7
ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟಿ ತಮಿಳಿನಲ್ಲಿಯೂ ಎರಡು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪುಷ್ಪಾ ಸಿನಿಮಾದ ಸಕ್ಸಸ್ ನಂತರ ನಟಿಗೆ ಒಳ್ಳೊಳ್ಳೆ ಸಿನಿಮಾ ಆಫರ್ಗಳು ಬರುತ್ತಿವೆ.
7/ 7
ಆದರೆ ನಟಿ ಎಷ್ಟು ಖ್ಯಾತಿ ಗಳಿಸಿದ್ದಾರೋ ಹಾಗೆಯೇ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ನೆಟ್ಟಿಗರು ಹಾಗೂ ನಟಿಯ ಮಧ್ಯೆ ಟ್ವೀಟ್ ವಾರ್ ಅಂತೂ ತುಂಬಾ ಕಾಮನ್ ಆಗಿಬಿಟ್ಟಿದೆ.