Anant Ambani-Radhika Merchant: ಗುಜರಾತಿ ಸಂಪ್ರದಾಯದಲ್ಲಿ ಗೋಲ್ ಧನ ಸಮಾರಂಭ ಅಂದ್ರೆ ಏನು? ಹೇಗೆ ನಡೆಯುತ್ತೆ?
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಮನೆ ಮಾಡಿದೆ. ಗೋಲ್ ಧನ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಂಬಾನಿ ಕುಟುಂಬಕ್ಕೆ ಹೊಸ ಸೊಸೆ ಬರಲಿದ್ದಾರೆ. ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅಂದರೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮ ಅಂಬಾನಿ ಅವರ ಮನೆಯಲ್ಲಿ ನಡೆಯಲಿದೆ.
2/ 8
ಮುಕೇಶ್ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಹೆಂದಿ ಶಾಸ್ತ್ರದ ಫೋಟೋ, ವಿಡಿಯೋದಲ್ಲಿ ವಧು-ವರರು ಮಿಂಚಿದ್ರು. ಇದೀಗ ಅಂಬಾನಿ ಮನೆಯಲ್ಲಿ ಗೋಲ್ ಧನ ಸಮಾರಂಭದ ಸಡಗರ ಮನೆ ಮಾಡಿದೆ.
3/ 8
ಗೋಲ್ ಧನ ಎಂಬುದು ಗುಜರಾತಿನ ಸಾಂಪ್ರದಾಯಿಕ ನಿಶ್ಚಿತಾರ್ಥ ಸಮಾರಂಭವಾಗಿದೆ. ಈ ಸಮಾರಂಭದಲ್ಲಿ ಎರಡೂ ಫ್ಯಾಮಿಲಿಯ ಬಂಧು-ಮಿತ್ರರು ಭಾಗಿಯಾಗಲಿದ್ದಾರೆ. ಸೆಲೆಬ್ರಿಟಿಗಳು ಕೂಡ ಭಾಗಿಯಾಗಲಿದ್ದಾರೆ.
4/ 8
ಗೋಲ್ ಧನ ಕಾರ್ಯಕ್ರಮದ ವೇಳೆ ಕೊತ್ತಂಬರಿ ಬೀಜ ಹಾಗೂ ಬೆಲ್ಲವನ್ನು ಅಥಿತಿಗಳಿಗೆ ನೀಡಲಾಗುತ್ತದೆ. ಗುಜರಾತಿ ವಿವಾಹದಲ್ಲಿ, ಗೋಲ್ ಧನ ಸಮಾರಂಭ ನಿಶ್ಚಿತಾರ್ಥ ರೀತಿ ನಡೆಯುತ್ತದೆ.
5/ 8
ವಧು ಮತ್ತು ಆಕೆಯ ಕುಟುಂಬದವರು ಸಿಹಿತಿಂಡಿಗಳು ಮತ್ತು ಉಡುಗೊರೆಗಳೊಂದಿಗೆ ವರನ ಮನೆಗೆ ಆಗಮಿಸುತ್ತಾರೆ. ಬಳಿಕ ಜೋಡಿ ನಿಶ್ಚಿತಾರ್ಥದ ಬದಲಿಸಿಕೊಳ್ತಾರೆ ವಿನಿಮಯ ಮಾಡಿಕೊಳ್ಳುತ್ತಾರೆ
6/ 8
ಬಳಿಕ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಇಬ್ಬರ ಕುಟುಂಬದಿಂದ 5 ವಿವಾಹಿತ ಮಹಿಳೆಯರಿಂದ ಆಶೀರ್ವಾದವನ್ನು ಪಡೆಯುತ್ತಾರೆ.
7/ 8
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ
8/ 8
ಮೆಹಂದಿ ಕಾರ್ಯಕ್ರಮದಲ್ಲಿ ಕೂಡ ಅದ್ಧೂರಿಯಾಗಿ ನಡೆಯಿತು. ವಧು-ವರರ ಡ್ಯಾನ್ಸ್ ಎಲ್ಲರ ಗಮನಸೆಳೆಯಿತು. ಕಲಾಂಕ್ ಚಿತ್ರದ 'ಘರ್ ಮೋರ್ ಪರ್ದೇಸಿಯಾ' ಹಾಡಿಗೆ ರಾಧಿಕಾ ಮರ್ಚೆಂಟ್ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.