ಮಡಿಲಿನಲ್ಲಿ ಗಣಪನನ್ನು ಕೂರಿಸಿಕೊಂಡ ಕುಲವಧು ಖ್ಯಾತಿಯ ನಟಿ ತುಂಬು ಗರ್ಭಿಣಿ Amrutha Ramamoorthy
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅಮೃತಾ ರಾಮಮೂರ್ತಿ (Amrutha Ramamoorthy) ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆಯಿತು. ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿರುವ ತುಂಬು ಗರ್ಭಿಣಿ ಅಮೃತಾ ಗಣಪತಿ ಹಬ್ಬಕ್ಕೆಂದು ಮಾಡಿಸಿರುವ ವಿಶೇಷ ಫೋಟೋಶೂಟ್ನಲ್ಲಿ ಗಣಪನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಅಮೃತಾ ರಾಮಮೂರ್ತಿ ಇನ್ಸ್ಟಾಗ್ರಾಂ ಖಾತೆ)
ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಅಮೃತಾ ರಾಮಮೂರ್ತಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಗರ್ಭಿಣಿಯಾದ ನಂತರ ಅಭಿನಯದಿಂದ ದೂರ ಇರುವ ಅಮೃತಾ ಅವರು ಫೋಟೋಶೂಟ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
2/ 5
ಸೀರೆ ಪ್ರಿಯೆಯಾಗಿರುವ ಅಮೃತಾ ಅವರು ಈ ಸಲ ಗಣೇಶ ಹಬ್ಬದ ವಿಶೇಷ ಫೋಟೋಶೂಟ್ನಲ್ಲಿ ಸಾಂಪ್ರದಾಯಿಕವಾಗಿ ಪೋಸ್ ಕೊಟ್ಟಿದ್ದಾರೆ. ಸೀರೆಗೆ ಮ್ಯಾಚಿಂಗ್ ಆಣಭರಣಗಳನ್ನೂ ತೊಟ್ಟಿದ್ದಾರೆ.
3/ 5
ಇತ್ತೀಚೆಗಷ್ಟೆ ಅಮೃತಾ ಅವರ ಸೀಮಂತ ಕಾರ್ಯಕ್ರಮದ ಅದ್ದೂರಿಯಾಗಿ ನೆರವೇರಿತ್ತು. ತುಂಬು ಗರ್ಭಿಣಿ ಅಮೃತಾ ಅವರು ಈ ವಿಶೇಷ ಫೋಟೋಶೂಟ್ನಲ್ಲಿ ಗಣಪನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಕೊಟ್ಟಿರುವ ಪೋಸ್ ತುಂಬಾ ಮುದ್ದಾಗಿದೆ.
4/ 5
ಮೊದಲ ಮಗುವಿನ ನಿರೀಕ್ಷೆಯಲ್ಲಿರು ಅಮೃತಾ ರಾಮಮೂರ್ತಿ ಅವರು ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿಯಿಂದ ವೈಯಕ್ತಿಕ ಕಾರಣಗಳಿಂದಾಗಿ ಹೊರ ಬಂದಿದ್ದ ಅಮೃತಾ, ಇತ್ತೀಚೆಗೆ ಮತ್ತೆ ಇದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
5/ 5
ಅಮೃತಾ ರಾಮಮೂರ್ತಿ ಅವರು ನಮ್ಮನೆ ಯುವರಾಣಿ ಸೀರಿಯಲ್ನಲ್ಲಿ ಸಾಕೇತ್ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ಅವರ ಮಡದಿ. ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವದಂದೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದ್ದರು.