ಕರಿಷ್ಮಾ ಕಪೂರ್ 1 ಕಾಲದಲ್ಲಿ ಬಾಲಿವುಡ್ನಲ್ಲಿ ಸೂಪರ್ ಕ್ವೀನ್ ಆಗಿ ಮಿಂಚಿದ್ರು. ಬಳಿಕ ಅಭಿಷೇಕ್ ಬಚ್ಚನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ತನ್ನ ನಿಶ್ಚಿತಾರ್ಥವನ್ನು ಮುರಿದುಬಿದ್ದ ನಂತರ ಕರಿಷ್ಮಾ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾದ್ರು. 2016ರ ಬಳಿಕ ವಿಚ್ಛೇದನ ಪಡೆದರು. ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟರು. ಇದಾದ ನಂತರ ಸಂಜಯ್ 3ನೇ ಮದುವೆಯಾದ್ರು ಆದರೆ ಕರಿಷ್ಮಾ ಒಂಟಿಯಾಗೇ ಜೀವನ ಮಾಡ್ತಿದ್ದಾರೆ. (ಫೋಟೋ Instagram @ therealkarismakapoor)
ನಟಿ ಮನಿಶಾ ಕೊಯಿರಾಲಾ ನೇಪಾಳಿ ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು ಮದುವೆಯಾದ್ರು. ಬಾಲಿವುಡ್ ನಲ್ಲಿ ಭಾರೀ ಜನಪ್ರಿಯ ನಟಿಯಾಗಿ ಮಿಂಚಿದ್ರು. ಅವರು ನಟನಾ ಜಗತ್ತಿನಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು. ಆದರೆ ನಟಿ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ 2 ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ಆದರೆ ಇಂದಿಗೂ ಮನೀಷಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಮತ್ತೆ ಮದುವೆಯಾಗಲಿಲ್ಲ.
ಚಿತ್ರಾಂಗದಾ ಸಿಂಗ್ ತನ್ನ ದಿಟ್ಟ ಶೈಲಿಯಿಂದಲೇ ಜನರ ಮನ ಗೆದ್ದಿದ್ದರು. ಚಿತ್ರಗಳಲ್ಲಿನ ಅವರ ಪಾತ್ರವು ವಿಭಿನ್ನ ವಿಶೇಷತೆಯನ್ನು ಹೊಂದಿತ್ತು. ಚಿತ್ರಾಂಗದಾ ಗಾಲ್ಫ್ ಆಟಗಾರ್ತಿ ಜ್ಯೋತಿ ರಾಂಧವ ಅವರನ್ನು ವಿವಾಹವಾದರು. ಆದರೆ ಈ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಇಬ್ಬರೂ ವಿಚ್ಛೇದನದ ಪಡೆದ್ರು. ಅಂದಿನಿಂದ, ನಟಿ ಒಂಟಿಯಾಗಿ ತನ್ನ ಜೀವನವನ್ನು ನಡೆಸುತ್ತಿದ್ದಾರೆ. (ಫೋಟೋ ಕೃಪೆ: Instagram @chitrangda)