Sandalwood: ರಸ್ತೆಗೆ ಪುನೀತ್ ಹೆಸರಿಡುವುದಕ್ಕೆ ಅಂಬರೀಷ್ ಅಭಿಮಾನಿಗಳ ಮನಸ್ತಾಪ, ಅಸಲಿಗೆ ನಡೆದಿದ್ದೇನು?
ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪಿದೆ. ಇತ್ತೀಚೆಗೆ ಈ ಬಗ್ಗೆ ಜಾಹೀರಾತು ನೀಡಿದ್ದ ಬಿಬಿಎಂಪಿ, ಈ ನಿರ್ಧಾರಕ್ಕೆ ಜನವರಿ 29ರ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಹೇಳಿತ್ತು.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿರುವುದು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ.ಕೆಲವು ರಸ್ತೆ, ವೃತ್ತಕ್ಕೆ ಪುನೀತ್ ಹೆಸರನ್ನು ಇಡಲಾಗಿದೆ. ಇನ್ನು ಕೆಲ ರಸ್ತೆಗಳಿಗೆ ಪುನೀತ್ ಹೆಸರು ಇಡೋಕೆ ಪ್ಲ್ಯಾನ್ ನಡೆದಿದೆ.
2/ 7
ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿರುವ ವಿಚಾರ. ಅದೇ ರೀತಿ ‘ರೆಬೆಲ್ ಸ್ಟಾರ್’ ಅಂಬರೀಷ್ (Ambareesh) ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.
3/ 7
ಬೆಂಗಳೂರಿನ (Bangalore) ರಸ್ತೆಯೊಂದಕ್ಕೆ ಪುನೀತ್ ಹೆಸರು ಇಡಲು ನಿರ್ಧರಿಸಲಾಗಿದೆ. ಇದಕ್ಕೆ ಅಂಬರೀಷ್ ಅಭಿಮಾನಿಗಳಿಂದಲೇ ವಿರೋಧ ವ್ಯಕ್ತವಾಗಿದೆ. ಪುನೀತ್ ರಾಜ್ಕುಮಾರ್ ಅವರ ಹೆಸರಿಡಲು ಅಂಬರೀಷ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
4/ 7
ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪಿದೆ. ಇತ್ತೀಚೆಗೆ ಈ ಬಗ್ಗೆ ಜಾಹೀರಾತು ನೀಡಿದ್ದ ಬಿಬಿಎಂಪಿ, ಈ ನಿರ್ಧಾರಕ್ಕೆ ಜನವರಿ 29ರ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಹೇಳಿತ್ತು.
5/ 7
ಈಗ ಇದಕ್ಕೆ ಅಂಬರೀಷ್ ಅಭಿಮಾನಿಗಳೇ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದ್ದಾರೆ. ಇದರಿಂದ ಅಪ್ಪು ಅಭಿಮಾನಿಗಳು ಹಾಗೂ ಅಂಬಿ ಅಭಿಮಾನಿಗಳ ನಡುವೆ ಶೀತಲ ಸಮರ ಶುರುವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
6/ 7
ಅಂಬರೀಷ್ ಅವರನ್ನು ಪುನೀತ್ ಪ್ರೀತಿಯಿಂದ ಮಾಮ ಎಂದು ಕರೆಯುತ್ತಿದ್ದರು. ಆದರೆ, ಇಬ್ಬರೂ ಮೃತಪಟ್ಟ ನಂತರ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಅಭಿಮಾನಿಗಳ ಮಧ್ಯೆ ಪ್ರತಿಷ್ಠೆ ಶುರುವಾಗಿದೆ.
7/ 7
ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡಬಾರದು. ಇದಕ್ಕೆ ಅಂಬಿ ಹೆಸರು ಇಡಬೇಕು. 1993ರ ಸಂದರ್ಭದಲ್ಲಿ ಈ ರಸ್ತೆಗೆ ಅಂಬಿ ಹೆಸರಿಡಲು ಬಾಮಾ ಹರೀಶ್ ಅವರು ಹೋರಾಟ ಮಾಡಿದ್ದರು ಎಂದು ನಮಗೆ ಮಾಹಿತಿ ಸಿಕ್ಕಿದೆ’ ಎಂದು ಅಂಬರೀಷ್ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.