Sumalatha Ambareesh: ಇದು ಜಲೀಲನ ಲವ್ ಸ್ಟೋರಿ! ಅಂಬಿ-ಸುಮಲತಾ ಮದುವೆ ಆಗಿದ್ದು ಹೀಗೆ
Sumalatha Ambareesh: ಸುಮಲತಾ ಹಾಗು ರೆಬೆಲ್ ಸ್ಟಾರ್ ಅಂಬರೀಷ್ ಜೋಡಿ ಸ್ಯಾಂಡಲ್ವುಡ್ನಲ್ಲಿ ಮಾದರಿ ಕಪಲ್ ಎನ್ನಬಹುದು. ಈ ಸುಂದರ ಜೋಡಿಯ ಲವ್ ಸ್ಟೋರಿ ಹಲವಾರು ಜನರಿಗೆ ಗೊತ್ತಿಲ್ಲ. ಇಂದು ರೆಬೆಲ್ ಸ್ಟಾರ್ ಜನ್ಮದಿನ , ಈ ವಿಶೇಷ ದಿನದಂದು ನಿಮ್ಮ ಮುಂದೆ ಆ ಪ್ರೇಮಕಥೆ.
ಮೇಡ್ ಫಾರ್ ಈಚ್ ಅದರ್ ಎನ್ನುವ ವಾಕ್ಯ ಈ ಜೋಡಿಗೆ ಸೂಕ್ತವಾಗುತ್ತದೆ ಎಂದರೆ ತಪ್ಪಿಲ್ಲ. ದಕ್ಷಿಣ ಭಾರತದ ಸ್ಟಾರ್ ಕಪಲ್ಗಳಲ್ಲಿ ಇವರು ಪ್ರಸಿದ್ದ. ಇವರ ಲವ್ ಸ್ಟೋರಿ ನೀವು ಕೇಳಿ.
2/ 8
ಹಾಗಾದ್ರೆ ಅಂಬಿ ಮತ್ತು ಸುಮಲತಾ ಭೇಟಿಯಾಗಿದ್ದು ಎಲ್ಲಿ ಪ್ರಶ್ನೆ ಹಲವರದ್ದು ಅದಕ್ಕೆ ಉತ್ತರ, ಆಹುತಿ ಚಿತ್ರದ ಶೂಟಿಂಗ್ ನಲ್ಲಿ. ಇದನ್ನು ಸುಮಲತಾ ಅವರೇ ಹೇಳಿಕೊಂಡಿದ್ದಾರೆ.
3/ 8
ಮೊದ ಮೊದಲು ಅವರಿಬ್ಬರ ಮಧ್ಯೆ ಯಾವುದೇ ಮಾತುಕತೆ ಆಗುತ್ತಿರಲಿಲ್ಲವಂತೆ, ಅಂಬಿ ಬೆಂಗಳೂರಿನಲ್ಲಿದ್ದರೆ, ಸುಮಲತಾ ಚೆನ್ನೈನಲ್ಲಿರುತ್ತಿದ್ದರು. ಆಗ ಮೊಬೈಲ್ ಕೂಡ ಇರಲಿಲ್ಲ.
4/ 8
ಆದರೆ ಹೀಗೆ ಹಲವಾರು ಭೇಟಿಯಾದ ಮೇಲೆ ಅವರಿಬ್ಬರ ನಡುವೆ ಸ್ನೇಹ ಬೆಳೆದು, ನಂತರ ಪ್ರೀತಿಗೆ ತಿರುಗಿತು ಎನ್ನುತ್ತಾರೆ ಸುಮಲತಾ.
5/ 8
8 ರಿಂದ 10 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿಗೆ ನ್ಯೂ ಡೆಲ್ಲಿ ಚಿತ್ರದ ಸಮಯದಲ್ಲಿ ಪ್ರೀತಿ ಹುಟ್ಟಿದ್ದಂತೆ. 2 ವರ್ಷದ ನಂತರ ಮದುವೆಯಾಗಲು ನಿರ್ಧಾರ ಮಾಡಿ, ಹಸೆ ಮಣೆ ಏರಿದ್ದು.
6/ 8
ಇನ್ನು ಮದುವೆ ಆದಾಗ ಅಂಬಿಗೆ 29 ವರ್ಷವಂತೆ. ಅಂಬಿಯ ಪ್ರತಿ ಸ್ವಭಾವವನ್ನು ಅರ್ಥ ಮಾಡಿಕೊಂಡು ಸುಮಲತಾ ಅವರೊಂದಿಗೆ ಬಾಳ್ವೆ ನಡೆಸಿದ್ದಾರೆ.
7/ 8
ಎಲ್ಲರಿಗೂ ತಿಳಿದಿರುವಂತೆ ಅವರಿಗೆ ಕೋಪ ಜಾಸ್ತಿ, ಇದರ ಬಗ್ಗೆ ಹೇಳುವ ಸುಮಲತಾ ಅಂಬಿಗೆ ಅಂಬಿಯೇ ಸಾಟೀ. ಎಂದಿಗೂ ಕ್ಷಮೆ ಕೇಳದ ಸ್ವಾಭಾವವಂತೆ.
8/ 8
ಅದೇನೇ ಇರಲಿ ಈ ಇಬ್ಬರ ಜೋಡಿ ನಿಜಕ್ಕೂ ಪರಿಪೂರ್ಣ. ಅಂಬಿ ಇಲ್ಲದೇ ಸುಮಾರು 4 ವರ್ಷ ಆಗುತ್ತಿದೆ. ಜಲೀಲನ ನೆನಪು ಕನ್ನಡಿಗರ ಮನದಲ್ಲಿ ಅಜರಾಮರ.