ಅಮೆಜಾನ್ ಪ್ರೈಮ್‍ನಲ್ಲಿ ಲವ್ ಮಾಕ್ಟೇಲ್ ಕನ್ನಡ ಚಿತ್ರವನ್ನು ನೋಡಿದೆ. ಸಿನಿಮಾ ತುಂಬಾ ಇಷ್ಟವಾಯಿತು. ಹೃದಯಕ್ಕೆ ಮುದ ನೀಡಿತು. 90 ಹಾಗೂ 2000ರ ಆಸುಪಾಸಿನಲ್ಲಿ ಜನಿಸಿದವರು ಈ ಸಿನಿಮಾವನ್ನು ಹೆಚ್ಚು ಇಷ್ಟಪಡುತ್ತಾರೆ. ಟ್ಯೂಶನ್ ಕ್ರಷಸ್, ಎಸ್‍ಎಂಎಸ್ ದಿನಗಳು, ಗಲ್ಲಿ ಕ್ರಿಕೆಟ್, ಪ್ರಿ ಸ್ಮಾರ್ಟ್ ಫೋನ್ ಲವ್...ಇವೆಲ್ಲವು ನನ್ನನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋಯಿತು ಎಂದು ಅಲ್ಲು ಸಿರೀಶ್ ಬರೆದುಕೊಂಡಿದ್ದಾರೆ.
ಇನ್ನು ಈ ಟ್ವೀಟ್ಗೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದು, ನಮ್ಮ ಸಿನಿಮಾ ಕುರಿತು ಮೆಚ್ಚುಗೆ ಸೂಚಿಸಿದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ್ತೊಮ್ಮೆ ಟ್ವೀಟ್ ಮಾಡಿದ ಅಲ್ಲು ಸಿರೀಶ್ ನಿರ್ದೇಶನ ಹಾಗೂ ನಟನೆ ಎರಡನ್ನೂ ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಂತಹ ಒಳ್ಳೆಯ ಚಿತ್ರ ನೀಡಿದಕ್ಕೆ ನಿಮಗೆ 'ಧನ್ಯವಾದಗಳು' ಎಂದು ಕನ್ನಡದಲ್ಲೇ ತಿಳಿಸಿದ್ದಾರೆ.