Allu Sneha Reddy: ಹಸಿರು ಡಿಸೈನರ್ ಸೀರೆಯಲ್ಲಿ ಸ್ನೇಹಾ ರೆಡ್ಡಿ! ಸೆರಗು ಭಾರೀ ಉದ್ದ
Allu Arjun wife Sneha Reddy: ಅಲ್ಲು ಅರ್ಜುನ್ ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಬ್ಯಾಕ್ಲೆಸ್ ಬ್ಲೌಸ್ ಹಾಗೂ ಸುಂದರವಾದ ಹಸಿರು ಸೀರೆ ಉಟ್ಟು ಫೋಟೋ ಶೂಟ್ ಮಾಡಿದ್ದಾರೆ. ನಟಿಯ ಫೋಟೋಸ್ ವೈರಲ್ ಆಗಿವೆ.
ಹೀರೋಯಿನ್ ಅಲ್ಲದಿದ್ದರೂ ಗ್ಲಾಮರ್ ಲೋಕದಿಂದ ದೂರ ಉಳಿದರೂ ತನ್ನ ಮಾಡರ್ನ್ ಲುಕ್ ನಿಂದ ಅಭಿಮಾನಿಗಳಿಗೆ ಫೋಟೋ ಟ್ರೀಟ್ ಕೊಡ್ತಾರೆ ಅಲ್ಲು ಸ್ನೇಹಾ ರೆಡ್ಡಿ. ಅಲ್ಲು ಅರ್ಜುನ್ ಅವರ ಪತ್ನಿ ತನ್ನ ಗ್ಲಾಮರಸ್ ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ.
2/ 9
ಟಾಲಿವುಡ್ನ ಸ್ಟೈಲಿಶ್ ಜೋಡಿಗಳನ್ನು ಲಿಸ್ಟ್ ಮಾಡಿದರೆ ಅಲ್ಲು ಹಾಗೂ ಸ್ನೇಹಾ ಟಾಪ್ನಲ್ಲಿದ್ದಾರೆ. ಈ ಸುಂದರ ಜೋಡಿಯು ಟ್ರೆಂಡ್ಗೆ ಅನುಗುಣವಾಗಿ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಾರೆ.
3/ 9
ಅಲ್ಲು ಅರ್ಜುನ್ ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಇತ್ತೀಚೆಗೆ ಬ್ಯಾಕ್ಲೆಸ್ ಬ್ಲೌಸ್ ಧರಿಸಿದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾದ ಭಂಗಿಗಳೊಂದಿಗೆ ಆನ್ಲೈನ್ನಲ್ಲಿ ಹೈಲೈಟ್ ಆಗಿದ್ದಾರೆ.
4/ 9
ತನಗೊಂದು ಪ್ರತ್ಯೇಕ ಇಮೇಜ್ ಕ್ರಿಯೇಟ್ ಮಾಡುವ ಪ್ರಯತ್ನವೋ ಅಥವಾ ಮಾಡರ್ನ್ ಸ್ಟೈಲ್ ತೋರಿಸಿದ್ದಾರೂ ಗೊತ್ತಿಲ್ಲ. ಆದರೆ ಈ ಅಲ್ಲು ಸೊಸೆ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಜಾಸ್ತಿಯೇ ಆ್ಯಕ್ಟಿವ್ ಆಗಿದ್ದಾರೆ.
5/ 9
ಮಹೇಶ್ ಬಾಬು ಮತ್ತು ಜೂನಿಯರ್ ಎನ್ ಟಿಆರ್ ಪತ್ನಿಯರು ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಅಲ್ಲು ಪತ್ನಿ ಗ್ಲಾಮರಸ್ ಲುಕ್ಗೆ ಈಗ ಆದ್ಯತೆ ಕೊಡುತ್ತಿದ್ದಾರೆ.
6/ 9
ಅಲ್ಲು ಸ್ನೇಹಾ ಹೀರೋಯಿನ್ಗಳಂತೆ ಫೋಟೋ ಶೂಟ್ಗಳಲ್ಲಿ ಭಾಗವಹಿಸಿ ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಮಾಡರ್ನ್ ಡ್ರೆಸ್ ಜೊತೆಗೆ ಬನ್ನಿ ಪತ್ನಿ ಟ್ರೆಂಡಿ ಡ್ರೆಸ್ನಲ್ಲಿಯೂ ಕಾಣಿಸಿಕೊಂಡು ಅಭಿಮಾನಿಗಳನ್ನು ಕಾಲಕಾಲಕ್ಕೆ ರಂಜಿಸುತ್ತಿದ್ದಾರೆ.
7/ 9
ಅಲ್ಲು ಅರ್ಜುನ್ ಜೊತೆಗೆ ಅವರ ಪತ್ನಿ ಅಲ್ಲು ಸ್ನೇಹಾರೆಡ್ಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸ್ನೇಹಾ ಹೊಸ ಫೋಟೋ ಶೂಟ್ ಗಳನ್ನು ಹಾಕುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದಾರೆ.
8/ 9
ಇತ್ತೀಚೆಗೆ ಸ್ನೇಹಾರೆಡ್ಡಿ ಕುರಿತ ಸುದ್ದಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಸಿನಿಮಾ ಪ್ರವೇಶದ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಆಕೆ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.
9/ 9
ಇತ್ತೀಚೆಗಷ್ಟೇ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಪುತ್ರಿ ಅರ್ಹಾ ಕೂಡ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಮುಂಬರುವ ಶಾಕುಂತಲಂ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಶಾಕುಂತಲಂ ಟ್ರೈಲರ್ ನಲ್ಲಿ ಅಲ್ಲು ಅರ್ಹ ಅವರ ದೃಶ್ಯ ಹೈಲೈಟ್ ಆಗಿತ್ತು.